ಶಿವಮೊಗ್ಗ ಲೈವ್
ಸಾಗರ: ಲಿಂಗನಮಕ್ಕಿ ಜಲಾಶಯದ (Linganamakki Dam) ಐದು ರೇಡಿಯಲ್ ಗೇಟ್‌ಗಳನ್ನು ಇಂದು ಪುನಃ ಮೇಲೆತ್ತಲಾಯಿತು. 3500 ಕ್ಯೂಸೆಕ್ ನೀರನ್ನು ಹೊರಬಿಡಲಾಯಿತು. (ಈ ಸುದ್ದಿಯನ್ನು ಇನ್ನು 62 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಸಚಿವ ಮಧು ಬಂಗಾರಪ್ಪ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ರೇಡಿಯಲ್ ಗೇಟ್‌ಗಳನ್ನು ಮೇಲೆತ್ತುವ ಸ್ವಿಚ್ ಒತ್ತಿದರು. ಜಲಾಶಯದಿಂದ ಕೆಲಕಾಲ ನೀರು ಹೊರಗೆ ಹಾಯಿಸಲಾಯಿತು.
ಇವತ್ತು ಲಿಂಗನಮಕ್ಕಿ ಜಲಾಶಯಕ್ಕೆ 12,568 ಕ್ಯೂಸೆಕ್ ಒಳ ಹರಿವು ಇತ್ತು. ಒಟ್ಟು 8,612 ಕ್ಯೂಸೆಕ್ ನೀರು ಹೊರ ಹರಿವು ಇದೆ. ನೀರಿನ ಮಟ್ಟ 1817 ಅಡಿ ಇದೆ. ಇಲ್ಲಿವೆ ಇಂದಿನ ಫೋಟೊಗಳು.
Linganamakki Dam Gates Opened








