ಶಿವಮೊಗ್ಗ ಲೈವ್.ಕಾಂ | SAGARA | 31 ಅಕ್ಟೋಬರ್ 2019
ಮುಂದಿನ ವರ್ಷ ಫೆಬ್ರವರಿಯಲ್ಲಿ ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿರುವ ಶ್ರೀ ಮಾರಿಕಾಂಬಾ ಜಾತ್ರೆ ಅಂಗವಾಗಿ ರಾಜ್ಯ ಸರ್ಕಾರ ಶಾಸಕರ ನಿಧಿಗೆ 6.80 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನವನ್ನು ನಗರವ್ಯಾಪ್ತಿಯಲ್ಲಿ ರಸ್ತೆ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದು ಶಾಸಕ ಹೆಚ್.ಹಾಲಪ್ಪ ಹೇಳಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಗರದ ವಿವಿಧ ಭಾಗಗಳಲ್ಲಿ ರಸ್ತೆ ನಿರ್ಮಾಣ, ಗಣಪತಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಸಂಬಂಧ ಸ್ಥಳ ಪರಿಶೀಲನೆ ನಡೆಸಿ, ಉಪ ವಿಭಾ ಗಾಧಿಕಾರಿಗಳ ಕಚೇರಿ ಆವರಣದಲ್ಲಿ ರಸ್ತೆ ಮತ್ತು ಕಾಂಪೌಂಡ್ ನಿರ್ಮಾಣ ವೀಕ್ಷಿಸಿ ಅವರು ಮಾತನಾಡಿದರು.
ಗಣಪತಿ ಕೆರೆ ಅಭಿವೃದ್ದಿಗೆ ಕರ್ನಾಟಕ ನೀರಾವರಿ ನಿಗಮ 4 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕೆರೆಯ ಸುತ್ತಲೂ ಬಾಕ್ಸ್ ಡ್ರೈನೇಜ್ ಮತ್ತು ಮೇಲ್ಪಾಗದಲ್ಲಿ ಸ್ಲ್ಯಾಬ್ ನಿರ್ಮಾಣ ಮಾಡಲಾಗುತ್ತದೆ. ಕೆರೆಗೆ ಹೊರಭಾಗದಿಂದ ಕೊಳಚೆ ನೀರು ಸೇರದಂತೆ, ಒತ್ತುವರಿ ತಡೆಯುವ ಉದ್ದೇಶದಿಂದ ಈ ಕಾರ್ಯ ಮಾಡಲಾಗುತ್ತದೆ. ಸ್ನಾಬ್ ನಿರ್ಮಾಣದ ನಂತರ ಮೇಲ್ಬಾಗದಲ್ಲಿ ವಾಕಿಂಗ್ ಪಾಥ್ ನಿರ್ಮಾಣ, ಸುರಕ್ಷತಾ ದೃಷ್ಟಿಯಿಂದ ಗ್ರಿಲ್ ಅಳವಡಿಕೆ ಮತ್ತು ವಿದ್ಯುದ್ದೀಪಗಳನ್ನು ಅಳವಡಿಸಲಾಗುವುದು ಎಂದರು.
ಎಸಿ ಡಾ.ಎಲ್.ನಾಗರಾಜ್, ಪೌರಾಯುಕ್ತ ಎಸ್.ರಾಜು, ಎಇಇ ಹೆಚ್.ಕೆ.ನಾಗಪ್ಪ, ಪಿಡಬ್ಲುಡಿ ಇಲಾಖೆ ಎಇಇ ದಿನೇಶ್, ಇಂಜಿನಿಯರ್’ಗಳಾದ ರಾಜೇಶ್, ವಿಠ್ಠಲ್ ಹೆಗಡೆ, ವಿನಾಯಕ್ ಮನೆಘಟ್ಟ ಸೇರದಿಂತೆ ಹಲವರು ಈ ಸಂದರ್ಭದ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]