ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA | 31 ಡಿಸೆಂಬರ್ 2019
ಇತಿಹಾಸ ಪ್ರಸಿದ್ಧ ಮಾರಿಕಾಂಬ ಜಾತ್ರೆಗೆ ಸಾಗರದಲ್ಲಿ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇವತ್ತು ಮರ ಗುರುತಿಸಿ, ಕಡಿಯುವ ಶಾಸ್ತ್ರ ನೆರವೇರಿಸಲಾಯಿತು. ಬೃಹತ್ ಹಲಸಿನ ಮರವನ್ನು ಗುರುತಿಸಲಾಗಿದೆ.
ಏನಿದು ಮರ ಕಡಿಯುವ ಶಾಸ್ತ್ರ?
ಮಾರಿಕಾಂಬ ಜಾತ್ರೆಗೂ ಮೊದಲು ಮರು ಗುರುತಿಸಿ, ಕಡಿಯಲಾಗುತ್ತದೆ. ರವಿ ಪೋತರಾಜ ಅವರು ಮರ ಗುರುತಿಸಿದರು. ಬಿ.ಹೆಚ್.ರಸ್ತೆಯ ಪೊಲೀಸ್ ವಸತಿ ಗೃಹದ ಬಳಿ ಇರುವ ಬೃಹತ್ ಹಲಸಿನ ಮರವನ್ನು ಗುರುತಿಸಲಾಗಿದೆ. ಮರ ಇರುವ ಮನೆ ಮಾಲೀಕರ ಅನುಮತಿ ಕೇಳುವ ಶಾಸ್ತ್ರವು ನಡೆಯಿತು. ಪೊಲೀಸ್ ಇಲಾಖೆಗೆ ಸೇರಿದ ಜಾಗವಾಗಿದ್ದರಿಂದ, ಸಹಾಯಕ ಪೊಲೀಸ್ ಅಧೀಕ್ಷಕ ಯತೀಶ್ ಅವರ ಅನುಮತಿ ಕೋರಲಾಯಿತು.
ಕಡಿದ ಮರದಿಂದ ಮಾರಿಕಾಂಬೆಯ ಮೂರ್ತಿ ತಯಾರಿಸುವ ಸಂಪ್ರದಾಯವಿತ್ತು. ಅದರೆ ಈಗ ಮರ ಕಡಿಯುವುದಕ್ಕೆ ವಿರೋಧ ವ್ಯಕ್ತವಾಗುವ ಹಿನ್ನೆಲೆ, ಪೋತರಾಜ ಗುರುತಿಸಿದ ಮರದ ಒಂದು ರೆಂಬೆಯನ್ನಷ್ಟೇ ಕಡಿಯಲಾಗುತ್ತದೆ. ಈಗಾಗಲೇ ಇರುವ ಮಾರಿಕಾಂಬೆಯ ಮೂರ್ತಿಯನ್ನು ಜೋಡಿಸಲು ಅಗತ್ಯವಿರುದ ಬೆಣೆಗಾಗಿ ಮರದ ರೆಂಬೆ ಕಡಿಯಲಾಗುತ್ತಿದೆ.
ರಸ್ತೆ ಉದ್ದಕ್ಕೂ ಚಾಟಿ ಬೀಸಿದ ಪೋತರಾಜ
ಮರ ಗುರುತಿಸುವ ಮೊದಲು ಉಪ್ಪಾರ ಕೇರಿಯಲ್ಲಿರುವ ರವಿ ಪೋತರಾಜ ಅವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಪ್ರಮುಖರು ಪೂಜೆಯಲ್ಲಿ ಭಾಗವಹಿಸಿದ್ದರು. ನಂತರ ಚಾಟಿ ಬೀಸುತ್ತ ಸಾಗರ ನಗರದ ಪ್ರಮುಖ ರಸ್ತೆಯಲ್ಲಿ ಪೋತರಾಜ ಹೆಜ್ಜೆ ಹಾಕಿದರು. ರಸ್ತೆಯಲ್ಲಿ ಚಾಟಿ ಬೀಸುತ್ತ ಸಾಗುತ್ತಿದ್ದರೆ, ಸುತ್ತಲು ಇದ್ದ ಜನರು ಕುತೂಹಲದಿಂದ ಗಮನಿಸುತ್ತಿದ್ದರು.
ಫೆಬ್ರವರಿ 18ರಂದು ವಿಶ್ವ ಪ್ರಸಿದ್ಧ ಮಾರಿಕಾಂಬ ಜಾತ್ರೆ ನಡೆಯಲಿದೆ. ಇವತ್ತಿನಿಂದ ಜಾತ್ರೆ ಸಂಬಂಧ ಪೂಜೆ ಮತ್ತಿತರ ಕಾರ್ಯಗಳು ಆರಂಭವಾಗಲಿದೆ.
ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಸಂಚಾಲಕ ಬಸವರಾಜು, ಗಂಗಾಧರ ಜಂಬಿಗೆ, ಜಿ.ಬಸವರಾಜ್, ಚಂದ್ರು, ಕೆ.ಸಿ.ನವೀನ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Sagara Marikamba Temple Jatre to be held on February 16.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422