ನರಸೀಪುರದ ನಾಟಿ ಔಷಧ ವಿತರಣೆ ತಾತ್ಕಾಲಿಕ ಮುಂದೂಡಿಕೆ, ಕಾರಣವೇನು? ಮತ್ತೆ ಯಾವಾಗ ಶುರುವಾಗುತ್ತೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

NAMMUR NEWS NEW PROMO 1 1

ಶಿವಮೊಗ್ಗ ಲೈವ್.ಕಾಂ | SAGARA NEWS | 24  MARCH 2021

ನರಸೀಪುರದ ನಾಟಿ ಔಷಧ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕರೋನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ನಾಟಿ ವೈದ್ಯರ ನಾರಾಯಣಮೂರ್ತಿ ಅವರ ಪುತ್ರ ರಾಘವೇಂದ್ರ, ಕರೋನ ಎರಡನೇ ಅಲೆ ಮತ್ತು ಲಾಕ್‌ ಡೌನ್‌ ಕುರಿತು ಚರ್ಚೆಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಾತ್ಕಾಲಿಕವಾಗಿ ಔಷಧ ನೀಡುವುದನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | ಕ್ಯಾನ್ಸರ್‌ಗೆ ಔಷಧಿ ನೀಡುತ್ತಿದ್ದ ಸಾಗರ ನರಸೀಪುರದ ನಾರಾಯಣಮೂರ್ತಿ ಇನ್ನಿಲ್ಲ

ಸಾಗರ ತಾಲೂಕು ಆನಂದಪುರ ಸಮೀಪದ ನರಸೀಪುರದಲ್ಲಿ ನಾಟಿ ಔಷಧ ನೀಡಲಾಗುತ್ತಿತ್ತು. ಲಾಕ್‌ ಡೌನ್‌ ಬಳಿಕ ಇಲ್ಲಿನ ಶಿವಗಂಗೆಯ ಗೋಡೋನ್‌ನಲ್ಲಿ ಔಷಧ ಕೊಡುತ್ತಿದ್ದರು. ಪ್ರತಿ ಗುರುವಾರ ಮತ್ತ ಭಾನುವಾರ ಔಷಧ ವಿತರಿಸಲಾಗುತ್ತಿತ್ತು.  ವಿವಿಧ ಜಿಲ್ಲೆ ಮತ್ತು ರಾಜ್ಯದಿಂದ ಜನರು ಔಷಧ ಪಡೆಯಲು ಇಲ್ಲಿಗೆ ಬರುತ್ತಾರೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕರೋನ ವ್ಯಾಪಕವಾಗಿ ಹರಡುತ್ತಿದೆ. ಆ ರಾಜ್ಯದಿಂದಲೂ ಇಲ್ಲಿಗೆ ಬರುವವರಿದ್ದಾರೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ  | ನರಸೀಪುರದ ನಾಟಿ ಔಷಧ ವಿತರಣೆ ಪುನಾರಂಭ, ಆದರೆ ಸ್ಥಳ ಬದಲಾವಣೆ ಆಗಿದೆ, ಎಲ್ಲಿ ಗೊತ್ತಾ?

ನಾಟಿ ಔಷಧ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕರೋನ ಕುರಿತು ಬೆಳವಣಿಗೆಗಳನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment