ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021
ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಕ್ಕೆ ನೊಟೀಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ | ಸಿಗಂದೂರು ದೇವಸ್ಥಾನಕ್ಕೆ ಸರ್ಕಾರದ ಸಮಿತಿ, ರದ್ದುಗೊಳಿಸುವಂತೆ ನಿಯೋಗದ ಮನವಿ
ದೇವಸ್ಥಾನದ ನಿರ್ವಹಣೆ ಸರಿಯಿಲ್ಲ. ಹಣ ದುರುಪಯೋಗವಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ, ದೇವಸ್ಥಾನವನ್ನು ಘೋಷಿತ ಸಂಸ್ಥೆ ಎಂದು ಘೋಷಿಸುವ ಸಲುವಾಗಿ ಆಕ್ಷೇಪಣೆಗಳು ಇದ್ದರೆ ತಿಳಿಸುವಂತೆ ಈ ಹಿಂದೆ ನೊಟೀಸ್ ನೀಡಲಾಗಿತ್ತು.
ಇದನ್ನೂ ಓದಿ | ಸಿಗಂದೂರು ದೇವಿ ದರ್ಶನಕ್ಕೆ ಜನವೋ ಜನ, ಸ್ಥಳೀಯರಲ್ಲಿ ವೈರಸ್ ಭಯ, ಮಾರ್ಗಸೂಚಿ ಮಾಯ
ಮೊದಲ ನೊಟೀಸ್ಗೆ ಉತ್ತರ ಬಾರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನೊಟೀಸ್ ನೀಡಲಾಗಿದೆ. ಬೆಂಗಳೂರಿನ ಧಾರ್ಮಿಕ ದತ್ತಿ ಆಯುಕ್ತರ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಏಪ್ರಿಲ್ 8ರಂದು ಘೋಷಿತ ಸಂಸ್ಥೆ ಎಂದು ನಿಗದಿಪಡಿಸುವ ಕುರಿತು ಸಭೆ ನಿಗದಿಪಡಿಸಲಾಗಿದೆ ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ‘ಯಡಿಯೂರಪ್ಪ ಅವರಿಗೆ ಸಿಗಂದೂರು ದೇವಿಯ ಶಾಪ ತಟ್ಟಿದೆ, ಅದಕ್ಕೆ ಈಗ ಹೀಗಾಗುತ್ತಿದೆ’
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]