ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 FEBRUARY 2024
SAGARA : ಆನ್‌ಲೈನ್‌ನಲ್ಲಿ ಖರೀದಿಸಿದ್ದ ಜೀನ್ಸ್ ಪ್ಯಾಂಟ್‌ಗಳಿಗೆ ಗುಣಮಟ್ಟವಿಲ್ಲ ಎಂದು ಹಿಂತಿರುಗಿಸಲು ಮುಂದಾದ ಹಿರಿಯ ನಾಗರಿಕರೊಬ್ಬರು 3.52 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಂಚನೆ ಆಗಿದ್ದು ಹೇಗೆ?
ಸಾಗರ ತಾಲೂಕಿನ ನಿವೃತ್ತ ಉದ್ಯೋಗಿಯೊಬ್ಬರು (ಹೆಸರು ಗೌಪ್ಯ) ಫೇಸ್‌ಬುಕ್‌ನಲ್ಲಿ ಕಾಣಿಸಿದ ಆನ್‌ಲೈನ್ ಮಾರ್ಕೆಟಿಂಗ್ ಪೇಜ್ ಮೂಲಕ ಪ್ಯಾಂಟ್‌ಗಳನ್ನು ಖರೀದಿಸಿದ್ದರು. ಕೊರಿಯರ್ ಮೂಲಕ ಪ್ಯಾಂಟುಗಳು ಮನೆಗೆ ತಲುಪಿದ್ದವು. ಆದರೆ ಪ್ಯಾಂಟುಗಳ ಗುಣಮಟ್ಟ ಸರಿ ಇರದ ಹಿನ್ನೆಲೆ, ನಿವೃತ್ತ ಉದ್ಯೋಗಿ ಕಸ್ಟಮರ್ ಕೇರ್‌ಗೆ ಸಂಪರ್ಕಿಸಿದ್ದರು.
ಲಕ್ಷ ಲಕ್ಷ ಹಣ ಮಾಯ
ಹಣ ರೀಫಂಡ್ ಮಾಡುವುದಾಗಿ ತಿಳಿಸಿದ್ದ ಕಸ್ಟಮರ್ ಕೇರ್‌ನ ವ್ಯಕ್ತಿ, ನಿವೃತ್ತ ಉದ್ಯೋಗಿಯ ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಮಾಹಿತಿ ಪಡೆದಿದ್ದ. ಹಿರಿಯ ನಾಗರಿಕ ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ 3.52 ಲಕ್ಷ ರೂ. ಹಣ ನಾಪತ್ತೆಯಾಗಿತ್ತು. ಕೂಡಲೆ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಸೈಬರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ದೂರು ನೀಡಿದ್ದಾರೆ. ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಹಂಚಿಕೊಳ್ಳುವಾಗ ಎಚ್ಚರ
ಸೈಬರ್ ವಂಚಕರು ನಾನಾ ರೂಪದಲ್ಲಿ ಜನರ ಖಾತೆಗೆ ಕನ್ನಾ ಹಾಕುತ್ತಿದ್ದಾರೆ. ವರ್ಕ್ ಫ್ರಂ ಹೋಮ್, ಆನ್‌ಲೈನ್ ಮಾರ್ಕೆಟಿಂಗ್, ಬಟ್ಟೆ ಮತ್ತು ಇತರೆ ವಸ್ತುಗಳ ಮಾರಾಟ ಸೇರಿದಂತೆ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಗುರುತು ಪರಿಚಯ ಇಲ್ಲದವರ ಜೊತೆಗೆ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರ, ಒಟಿಪಿ ಸೇರಿದಂತೆ ಯಾವುದೆ ಮಾಹಿತಿ ಒದಗಿಸದೆ ಇರುವುದು ಸೂಕ್ತ.
ಇದನ್ನೂ ಓದಿ – ಎಲ್ಲ ತಾಲೂಕಿನಲ್ಲೂ ಲೋಕಾಯುಕ್ತ ಸಭೆ, ಯಾವ್ಯಾವ ದಿನ? ಎಲ್ಲಿ ಸಭೆ ನಡೆಯುತ್ತೆ? ಏನೇನು ದೂರು ಸಲ್ಲಿಸಬಹುದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422