ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 3 JANUARY 2024
ಸಾಗರ : ಚಲಿಸುತ್ತಿದ್ದ ಆಟೋದಲ್ಲಿ (Auto) ಪ್ರಯಾಣಿಕನೊಬ್ಬ ಚಾಲಕನ ಕುತ್ತಿಗೆಗೆ ಕೈ ಹಾಕಿ ಬಿಗಿಯಾಗಿ ಒತ್ತಲು ಪ್ರಯತ್ನಸಿದ್ದಾನೆ. ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಮೊಬೈಲ್ ಫೋನ್ನಿಂದ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಚಾಲಕ ಪಾರಾಗಿದ್ದಾನೆ.
ಸಾಗರ ತಾಲೂಕು ಮಾಸೂರು ಬಳಿ ಘಟನೆ ಸಂಭವಿಸಿದೆ. ಆಟೋ ಚಾಲಕ ಗಣೇಶ್ ಕುತ್ತಿಗೆ ನೋವಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸಾಗರ to ಸೊರಬ, ರಾತ್ರಿ ಆಟೋ ಪ್ರಯಾಣ
ಸಾಗರ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಸೊರಬಕ್ಕೆ ಬಾಡಿಗೆಗೆ ಬರುವಂತೆ ಆಟೋ ಚಾಲಕನಿಗೆ ಕೇಳಿದ್ದ. ಚಾಲಕ ಒಪ್ಪಿಕೊಂಡಿದ್ದು ರಾತ್ರಿ 10.30ರ ಹೊತ್ತಿಗೆ ಮಾಸೂರು ಸಮೀಪ ತೆರಳುತ್ತಿದ್ದಾಗ ಪ್ರಯಾಣಿಕ, ಚಾಲಕ ಗಣೇಶನ ಕುತ್ತಿಗೆಗೆ ಕೈ ಹಾಕಿದ್ದಾ ಬಿಗಿಯಾಗಿ ಒತ್ತಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ತಕ್ಷಣ ಆಟೋ ನಿಲ್ಲಿಸಿದ ಚಾಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪ್ರಯಾಣಿಕ ಮೊಬೈಲ್ನಿಂದ ಕುತ್ತಿಗೆಗೆ ಹೊಡೆದಿದ್ದಾನೆ. ಬಳಿಕ ದೊಣ್ಣೆಯಿಂದಲು ಹಲ್ಲೆಗೆ ಮುಂದಾಗಿದ್ದಾನೆ.
ಚಾಲಕ ಗಣೇಶ್ ತಕ್ಷಣ ದೊಣ್ಣೆ ಕಸಿದುಕೊಂಡಿದ್ದು, ಪ್ರಯಾಣಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ‘ನನಗೆ ತೊಂದರೆ ಕೊಟ್ಟವರೆಲ್ಲ ಅನುಭವಿಸಿದ್ದಾರೆ, ಇನ್ಮುಂದೆಯು ಅನುಭವಿಸುತ್ತಾರೆʼ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422