ದಿಢೀರ್‌ ರಸ್ತೆಗೆ ಬಂದ ಕರು, ಡಿಕ್ಕಿ ತಪ್ಪಿಸಲು ಹೋಗಿ ಪಾದಚಾರಿಗೆ ಗುದ್ದಿದ ಕಾರು

ಸಾಗರ: ರಸ್ತೆಗೆ ಅಡ್ಡಬಂದ ಕರುವಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕಾರೊಂದು ಪಾದಚಾರಿಗೆ ಗುದ್ದಿದೆ. ಹೊನ್ನಾವರ-ತಾಳಗುಪ್ಪ ರಸ್ತೆಯ ಗೌರಿಕೇರೆ ಬಳಿ ಘಟನೆ ನಡೆದಿದೆ.

ರಘು ಬಿ. (25) ಅಪಘಾತದಲ್ಲಿ ಗಾಯಗೊಂಡ ಯುವಕ. ಸೆಪ್ಟೆಂಬರ್ 19ರ ರಾತ್ರಿ ಗೌರಿಕೇರೆ ದಾಟಿ ನಡೆದುಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರಾತ್ರಿ ಗೌರಿಕೇರೆ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕರುವೊಂದು ಏಕಾಏಕಿ ರಸ್ತೆಯ ಮಧ್ಯಕ್ಕೆ ಓಡಿ ಬಂದಿದೆ. ಈ ವೇಳೆ ಹೊನ್ನಾವರ ಕಡೆಯಿಂದ ತಾಳಗುಪ್ಪ ಕಡೆಗೆ ಹೋಗುತ್ತಿದ್ದ ಕಾರು ಕಾರು ರಸ್ತೆಗೆ ಬಂದ ಕರುವಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ರಸ್ತೆಯ ಎಡಭಾಗಕ್ಕೆ ಕೆಳಗಿಳಿದಿದೆ.

SAGARA-NEWS-GRAPHICS-BY-SHIVAMOGGA-LIVE

ಈ ಸಂದರ್ಭ ರಸ್ತೆ ಬದಿಯಲ್ಲಿದ್ದ ರಘು ಅವರಿಗೆ ಕಾರು ಡಿಕ್ಕಿಯಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ರಘು ಅವರ ಎಡಗಾಲಿಗೆ ಗಾಯವಾಗಿದೆ. ತಕ್ಷಣ ಸ್ಥಳೀಯರು ಗಾಯಾಳುವನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.