ಸಾಗರದ ವಿವಿಧೆಡೆ ಮೇ 24ರಂದು ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸಾಗರ: ಇಲ್ಲಿನ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ (Power distribution center) ತ್ರೈಮಾಸಿಕ ನಿರ್ವಹಣಾ ಕಾಮಗಾರಿ (Quarterly maintenance work) ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮೇ 24ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Power interruption) ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಗರದ ಮಂಗಳಬೀಸು ಕೈಗಾರಿಕಾ ವಸಾಹತು ಪ್ರದೇಶ (Industrial estate area), ಎಸ್.ಎನ್. ನಗರ, ರಾಮನಗರ, ಆರ್‌ಎಂಸಿ ರಸ್ತೆ (RMC road), ಮಾಲ್ವೆ, ಹೆಗ್ಗೋಡು, ಭೀಮನಕೋಣೆ, ಆವಿನಹಳ್ಳಿ, ಬೊಮ್ಮತ್ತಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ, ಭೀಮನೇರಿ, ಕೆಳದಿ ಪಂಚಾಯಿತಿ (Gram Panchayat) ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಪ್ರಕಟಣೆ (Press release) ತಿಳಿಸಿದೆ.

SAGARA-NEWS-UPDATE

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp