SAGARA | ಇನ್ನೂ ಆರಂಭವಾಗದ ಇಂದಿರಾ ಕ್ಯಾಂಟೀನ್, ಜೋಗ ರಸ್ತೆಯಲ್ಲಿ ಮಾಜಿ ಮಿನಿಸ್ಟರ್ ಪ್ರತಿಭಟನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SAGARA | 05 ಡಿಸೆಂಬರ್ 2019

ಬಿಜೆಪಿ ಸರ್ಕಾರ ಮತ್ತು ಶಾಸಕರ ನಿರ್ಲಕ್ಷ್ಯದಿಂದಾಗಿ ಈವರೆಗೂ ಸಾಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿಲ್ಲ ಎಂದು ಆರೋಪಿಸಿ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜೋಗ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಬಡವರ ಹಸಿವು ನೀಗಿಸಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಆದರೆ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಕಾರ್ಯರೂಪಕ್ಕೆ ತರದೆ ಇರುವುದು ವಿಷಾದನೀಯ. ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿದ್ದೇನೆ. ಶಾಸಕರು ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಬೇಕಿದ್ದರೆ ಮೋದಿ ಹೆಸರೆ ಇಟ್ಟುಕೊಳ್ಳಲಿ

ಈ ಕ್ಯಾಂಟೀನ್’ನಲ್ಲಿ ಬಡವರ ಅನುಕೂಲಕ್ಕೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತದೆ. ಇಂದಿರಾ ಗಾಂಧಿ ಅವರ ಹೆಸರು ಇಟ್ಟಿರುವುದಕ್ಕೆ ಬಿಜೆಪಿಗೆ ವಿರೋಧವಿದ್ದರೆ ಪ್ರಧಾನಿ ಮೋದಿ ಅವರ ಹೆಸರನ್ನೇ ಇಟ್ಟುಕೊಂಡು ಕ್ಯಾಂಟೀನ್ ಆರಂಭಿಸಲಿ. ಬಡವರಿಗೆ ಅನುಕೂಲ ಆಗಬೇಕಷ್ಟೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಟೀಕಿಸಿದರು.

ಟೀ ಮಾಡಿ ಪ್ರತಿಭಟನೆ

ಇನ್ನು, ಪ್ರತಿಭಟನೆಯ ಅಂಗವಾಗಿ ಇಂದಿರಾ ಕ್ಯಾಂಟೀನ್ ಮುಂಭಾಗ ಒಲೆ ಹಚ್ಚಿ, ಟೀ ಮಾಡಿ ಹಂಚಲಾಯಿತು. ಈ ಮೂಲಕ ಸರ್ಕಾರದ ನಿಧಾನಗತಿ ನಡೆಯನ್ನು ವಿರೋಧಿಸಲಾಯಿತು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಪ್ರಮುಖರಾದ ಮಂಜುನಾಥ ಚಿಪ್ಪಳ್ಳಿ, ಅಣ್ಣಪ್ಪ ಬಾಳೆಗುಂಡಿ, ರವಿಕುಮಾರ್, ಮಧುಮಾಲತಿ, ಶಿವಾನಂದ ಕುಗ್ವೆ, ತೀ.ನಾ.ಶ್ರೀನಿವಾಸ್, ಮಹಾಬಲ ಕೌತಿ, ಸುಧಾಕರ ಕುಗ್ವೆ, ಮೊಹಮದ್ ಖಾಸಿಂ, ಪ್ರಭಾಕರ್ ಖಂಡಿಕಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

Former Minister Kagodu Thimmappa and Dalit Sangarsha Samithi led a protest against delay in starting Indira Canteen in Sagara. Protest took place in front of Indira Canteen in Jog Road.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment