ಶಿವಮೊಗ್ಗ ಲೈವ್.ಕಾಂ | SAGARA NEWS | 26 MARCH 2021
ನಾಟಿ ಔಷಧ ವಿತರಣೆ ಸ್ಥಗಿತಗೊಳಿಸಿದ ಕ್ರಮ ಖಂಡಿಸಿ ಔಷಧ ಪಡೆಯಲು ಬಂದಿದ್ದ ರೋಗಿಗಳು ಮತ್ತು ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು. ಆನಂದಪುರ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿದರು.
ಇದನ್ನೂ ಓದಿ | ನರಸೀಪುರದ ನಾಟಿ ಔಷಧ ವಿತರಣೆ ತಾತ್ಕಾಲಿಕ ಮುಂದೂಡಿಕೆ, ಕಾರಣವೇನು? ಮತ್ತೆ ಯಾವಾಗ ಶುರುವಾಗುತ್ತೆ?
ಆನಂದಪುರ ಸಮೀಪ ಶಿವಗಂಗೆಯಲ್ಲಿ ನಾಟಿ ಔಷಧ ವಿತರಣೆ ಮಾಡಲಾಗುತ್ತಿದೆ. ನರಸೀಪುರದ ನಾರಾಯಣಮೂರ್ತಿ ಅವರ ಕುಟುಂಬದವರು ಔಷಧ ವಿತರಿಸುತ್ತಿದ್ದಾರೆ. ಗುರುವಾರ ಮತ್ತು ಭಾನವಾರ ಮಾತ್ರ ಇಲ್ಲಿ ಔಷಧ ಕೊಡಲಾಗುತ್ತದೆ. ಕರೋನ ಹಿನ್ನೆಲೆಯಲ್ಲಿ ಹೆಚ್ಚು ಜನರನ್ನು ಸೇರಿಸಬಾರದು ಎಂಬ ಕಾರಣಕ್ಕೆ ಔಷಧ ನೀಡದಿರುವಂತೆ ಆನಂದಪುರ ಗ್ರಾಮ ಪಂಚಾಯಿತಿ ವತಿಯಿಂದ ನೊಟೀಸ್ ನೀಡಲಾಗಿತ್ತು.
ನಾಟಿ ಔಷಧ ವಿತರಣೆಯನ್ನು ನಿಲ್ಲಿಸಿರುವ ವಿಚಾರ ತಿಳಿಯದೆ ದೂರದ ಊರುಗಳಿಂದ ಬಂದವರು, ಔಷಧ ಸಿಗದೆ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟಿಸಿ, ಔಷಧ ನೀಡಲು ಅವಕಾಶ ನೀಡುವಂತೆ ಆಗ್ರಹಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಮಧ್ಯವಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಆದರೆ ಯಾರೊಬ್ಬರಿಗೂ ಔಷಧ ವಿತರಣೆ ಮಾಡಲಿಲ್ಲ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]