ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA NEWS, 19 SEPTEMBER 2024 : ಸಾಗರ ತಾಲೂಕಿನಲ್ಲಿ ಏನೇನಾಯ್ತು? ಇಲ್ಲಿದೆ 5 ಫಟಾಫಟ್ ನ್ಯೂಸ್.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಾಗರ NEWS : ದಲಿತರ ನಿಂದನೆ ಮಾಡಿರುವ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಸಾಗರ ಶಾಖೆಯ ವತಿಯಿಂದ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಉಪ ವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಕೆ. ತಾಲೂಕು ಸಂಚಾಲಕ ಲಕ್ಷ್ಮಣ ಸಾಗರ್, ರವಿ ಜಂಬಗಾರು, ಧರ್ಮರಾಜ್, ಮಹಾದೇವಪ್ಪ ಸೇರಿದಂತೆ ಹಲವರು ಇದ್ದರು.ಶಾಸಕ ಸ್ಥಾನದಿಂದ ವಜಾಗೆ ಆಗ್ರಹಿಸಿ ಪ್ರತಿಭಟನೆ
ಸಾಗರ NEWS : ಪ್ರತಿಭಾ ಕಾರಂಜಿಯಲ್ಲಿ ಕ್ರೈಸ್ತ ಪ್ರಾರ್ಥನೆ ಗೀತೆ ಹಾಡಿಸಿದ್ದನ್ನು ಖಂಡಿಸಿ ತಾಲೂಕಿನ ಪ್ರೌಢಶಾಲೆಯೊಂದರ ಮುಂದೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಾರ್ಥನೆ ಹಾಡಿಸಿದ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಮನಸಿನಲ್ಲಿ ಅನ್ಯಧರ್ಮಿದ ಬೀಜ ಬೀತ್ತುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಪಟ್ಟ ಶಿಕ್ಷಕ ಕ್ಷಮೆಯಾಚಿಸಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು. ವೇದಿಕೆಯ ಜಿಲ್ಲಾ ಸಂಚಾಲಕ ಸುಧೀಂದ್ರ.ಕೆ.ಎಸ್., ತಾಲೂಕು ಸಂಚಾಲಕ ನಂದೀಶ್, ಮಂಜಣ್ಣ, ಪವನ್, ಪ್ರವೀಣ್ ಸೇರಿದಂತೆ ಹಲವರು ಇದ್ದರು.ಶಾಲೆ ಎದುರು ಸಂಘಟನೆ ಪ್ರತಿಭಟನೆ
ಸಾಗರ NEWS : ತಾಲೂಕು ಫೋಟೊ ಮತ್ತು ವಿಡಿಯೋಗ್ರಾಫರ್‌ಗಳ ಸಂಘದ ವತಿಯಿಂದ ಮಲೆನಾಡು ಸಿರಿ ಸಭಾಂಗಣದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ. ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಂದ ಉದ್ಘಾಟನೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಂಘದ ಅಧ್ಯಕ್ಷ ಷಣ್ಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಹಿರಿಯ ಛಾಯಾಗ್ರಾಹಕರಾದ ಶ್ರೀಧರ್.ಎಸ್.ಜಿ ಮತ್ತು ನಾಗರಾಜ್.ಹೆಚ್.ಕೆ. ಅವರಿಗೆ ಛಾಯಾಸಾಧಕ ಪ್ರಶಸ್ತಿ ನೀಡಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಛಾಯಾಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.ವಿಶ್ವ ಛಾಯಾಗ್ರಹಣ ದಿನಾಚರಣೆ
ಇದನ್ನೂ ಓದಿ » ರಸ್ತೆ ದಾಟುತ್ತಿದ್ದ ಹೆಬ್ಬಾವಿನ ತಲೆ ಮೇಲೆ ಹರಿದ ವಾಹನ, ವಿಲವಿಲ ಒದ್ದಾಡುತ್ತಿದ್ದ ಹಾವು ರಕ್ಷಣೆ, ಚಿಕಿತ್ಸೆ
ಸಾಗರ NEWS : ಕಲಿಕೆಯ ಜೊತೆಗೆ ಮಕ್ಕಳು ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಚೈತನ್ಯ ಮೂಡಲಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ನೆಹರು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಿಂದ ಜೀವನಕ್ಕೆ ಚೈತನ್ಯ
ಸಾಗರ NEWS : ಪ್ರತಿಭಾ ಕಾರಂಜಿಯಲ್ಲಿ ಕ್ರೈಸ್ತ ಪ್ರಾರ್ಥನಾ ಗೀತೆಯನ್ನು ಮಕ್ಕಳಿಂದ ಹಾಡಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಲಾಗಿದೆ. ಆ ಸರ್ಕಾರಿ ಶಾಲೆಯಲ್ಲಿ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳೇ ಇಲ್ಲದಿದ್ದರು ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ಕ್ರೈಸ್ತ ಪ್ರಾರ್ಥನೆ ಗೀತೆ ಹಾಡಿಸಿ ಹಿಂದೂಗಳು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ. ಉಪ ವಿಭಾಗಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ, ಪ್ರತಿಭಟನೆ