ರಸ್ತೆ ದಾಟುತ್ತಿದ್ದ ಹೆಬ್ಬಾವಿನ ತಲೆ ಮೇಲೆ ಹರಿದ ವಾಹನ, ವಿಲವಿಲ ಒದ್ದಾಡುತ್ತಿದ್ದ ಹಾವು ರಕ್ಷಣೆ, ಚಿಕಿತ್ಸೆ

SHIMOGA NEWS, 19 SEPTEMBER 2024 : ರಸ್ತೆ ದಾಟುತ್ತಿದ್ದ ಹೆಬ್ಬಾವಿನ (Python) ಮೇಲೆ ವಾಹನ ಹರಿದು ಗಂಭೀರ ಗಾಯಗೊಂಡಿದೆ. ಗ್ರಾಮಸ್ಥರು ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆ ಒಪ್ಪಿಸಿದ್ದಾರೆ. ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಹೆಬ್ಬಾವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹಣಗೆರೆ ರಸ್ತೆಯ ಖಾಸಗಿ ಶಾಲೆ ಬಳಿ ವಾಹನ ಹರಿದು ಹೆಬ್ಬಾವು ಗಾಯಗೊಂಡಿತ್ತು. ರಸ್ತೆ ದಾಟುವಾಗ ವಾಹನವೊಂದು ತಲೆ ಮೇಲೆ ಹರಿದು ಹಾವು ಗಾಯಗೊಂಡಿತ್ತು. ರಸ್ತೆ ಪಕ್ಕದ ಗಿಡಗಂಟಿ ಮಧ್ಯೆ ಒದ್ದಾಡುತ್ತಿತ್ತು.

ಇದನ್ನು ಗಮನಿಸಿದ ಆಯನೂರಿನ ಅರ್ಜುನ್, ಅದರ್ಶ, ಶರತ್, ಮಂಜುನಾಥ, ಆಕಾಶ್ ಎಂಬುವವರು ಉರಗ ರಕ್ಷಕ ಅಮಿತ್‌ಗೆ ಕರೆ ಮಾಡಿ ಹಾವನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಹೆಬ್ಬಾವಿಗೆ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಆರೈಕೆ ಮಾಡಲಾಗುತ್ತಿದೆ.

Python-saved-by-ayanuru-youths

Banana-Mandi-In-Shimoga-APMC

ಇದನ್ನೂ ಓದಿ » ತೆರಿಗೆ ಇಲಾಖೆಗೆ ಹೋಗಿದ್ದ ಶಿವಮೊಗ್ಗದ ಮಹಿಳಾ ಉದ್ಯಮಿಗೆ ಕಾದಿತ್ತು ಆಘಾತ

Python-saved-by-ayanuru-youths

Leave a Comment