ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 15 APRIL 2021
ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ರಥೋತ್ಸವವನ್ನು ಸರಳವಾಗಿ ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ. ಏಪ್ರಿಲ್ 16ರಂದು ರಥೋತ್ಸವ ಆಯೋಜಿಸಲಾಗಿದೆ.
ಕರೋನ ಲಾಕ್‍ಡೌನ್ ಹಿನ್ನೆಲೆ ಕಳೆದ ವರ್ಷ ರಥೋತ್ಸವ ನಿಷೇಧಿಸಲಾಗಿತ್ತು. ಈ ಬಾರಿ ಸರಳವಾಗಿ ರಥೋತ್ಸವ ಆಚರಿಸಲಾಗುತ್ತಿದೆ. ಶಾಸಕ ಹರತಾಳು ಹಾಲಪ್ಪ ಅವರು ಸಾಗರ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಈ ಸಂಬಂಧ ಸಭೆ ನಡೆಸಿದರು.
ರಥೋತ್ಸವ ಹತ್ತು ಮೀಟರ್ ಮಾತ್ರ
ಶ್ರೀ ಮಹಾಗಣಪತಿ ರಥೋತ್ಸವಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ. ಹತ್ತು ಮೀಟರ್ ಮಾತ್ರ ರಥೋತ್ಸವ ನಡೆಯಲಿದೆ. ಪುರೋಹಿತರು, ತಾಂತ್ರಿಕರು, ಐದು ಸೀಮಿಯ ಭಕ್ತರು, ಸ್ವಯಂ ಸೇವಕರು ಸೇರಿ 50 ಮಂದಿ ಮಾತ್ರ ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.
ಸಾರ್ವಜನಿಕರ ನಿಯಂತ್ರಣಕ್ಕೆ ಬ್ಯಾರಿಕೇಡ್
ಕೋವಿಡ್ ನಿಯಮ ಪಾಲಿಸಬೇಕಿರುವುದರಿಂದ ಸಾರ್ವಜನಿಕರನ್ನು ನಿಯಂತ್ರಿಸಲು ದೇವಸ್ಥಾನದ ಸಮೀಪ ಬ್ಯಾರಿಕೇಡ್ ಹಾಕಲಾಗುತ್ತದೆ. ರಥೋತ್ಸವದ ಬಳಿಕ ಸಾರ್ವಜನಿಕ ದೇವರ ದರ್ಶನ ಪಡೆಯಬಹುದಾಗಿದೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ಎಲ್.ನಾಗರಾಜ್ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಡಿವೈಎಸ್‍ಪಿ ವಿನಾಯಕ ಎನ್.ಶೆಟಿಗೇರ್, ದೇವಸ್ಥಾನದ ಆಡಳಿತಾಧಿಕಾರಿ ರಂಗಣ್ಣ, ಪ್ರಮುಖರಾದ ಟಿ.ಡಿ.ಮೇಘರಾಜ್, ಐ.ವಿ.ಹೆಗಡೆ, ರವೀಶ್ ಕುಮಾರ್, ಲಕ್ಷ್ಮಣ ಜೋಯ್ಸ್, ಭಾವನಾ ಸಂತೋಷ್, ಸತೀಶ್. ಕ, ಅರುಣ ಘಾಟೆ, ಸಂತೋಷ್ ಶೇಟ್ ಇದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422