ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 23 ಜನವರಿ 2020
ಸಾಗರದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಪೊಲೀಸ್ ಅಧಿಕಾರಿಗಳು ದಂಡ ಹಾಕಲ್ಲ, ಬದಲಾಗಿ ಲಾಡು ಕೈಗಿಡ್ತಾರೆ, ಗುಲಾಬಿ ಹೂ ಕೊಡ್ತಾರೆ..!
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲ ಸಂದರ್ಭಗಳಲ್ಲೂ ಕಾನೂನು ಮೂಲಕವೇ ಜಾಗೃತಿ ಅಸಾಧ್ಯ ಎನ್ನುವ ಕಾರಣಕ್ಕೆ ಮೊದಲ ಬಾರಿಗೆ, ಈ ರೀತಿ ಪ್ರೀತಿಯಿಂದ ತಿಳಿ ಹೇಳುವ ಪ್ರಯತ್ನ ನಡೆಯುತ್ತಿದೆ. ಹಾಗೆಂದು ಮತ್ತೆ ಮತ್ತೆ ಅದೇ ಚಾಳಿ ಮುಂದುವರೆದರೆ ದಂಡ ತಪ್ಪಿದ್ದಲ್ಲ. ಇದು ನೂತನ ಡಿವೈಎಸ್ಪಿ ಜಿ. ರಘು ಅವರ ಐಡಿಯಾ.
ವಾಹನ ಸವಾರರಲ್ಲಿ ಪರವಾನಗಿ, ವಿಮೆ ಇಲ್ಲದಿದ್ದರೆ, ಹೆಲ್ಮಟ್ ಧರಿಸದಿದ್ದರೆ ಲಾಡು – ಗುಲಾಬಿ ಕೊಟ್ಟು ವಿಮೆ ಮಾಡಿಸಿ, ಪರವಾನಗಿ ಮುಖ್ಯ, ಹೆಲ್ಮೆಟ್ ಧರಿಸಿ ಎಂದು ತಿಳಿ ಹೇಳುತ್ತೇವೆ ಎಂದು ಡಿವೈಎಸ್ಪಿ ಜಿ.ರಘು ಹೇಳಿದರು.
ಎಷ್ಟೋ ವಾಹನಗಳಿಗೆ ವಿಮೆಯೇ ಇರುವುದಿಲ್ಲ. ಹಾಗೆಯೇ ಗಾಡಿ ಓಡಿಸುತ್ತಿರುತ್ತಾರೆ. ಅವಘಡಗಳು ಸಂಭವಿಸಿದಾಗ ಮಾತ್ರ ಅದರ ಬೆಲೆ ತಿಳಿಯುತ್ತದೆ. ಮೊದಲು ವಿಮೆ ಮಾಡಿಸಿಕೊಳ್ಳಲು ಜನರಿಗೆ ತಿಳಿವಳಿಕೆ ನೀಡಲಾಗುವುದು. ನಾನು ಮೂಲತಃ ಶಿವಮೊಗ್ಗ ಜಿಲ್ಲೆಯವನೇ ಆಗಿರುವುದರಿಂದ ಸಾಗರ ತಾಲೂಕಿನ ಬಗ್ಗೆ ತುಂಬ ಕೇಳಿದ್ದೇನೆ. ಇಲ್ಲಿಯ ಜನ ಶಾಂತಿಪ್ರಿಯರು. ಎಲ್ಲರ ಸಹಕಾರದಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡೋಣ ಎಂದು ಸುದ್ದಿಗಾರರಿಗೆ ತಿಳಿಸಿದರು.
ಶಿವಪ್ಪನಾಯಕ ಸರ್ಕಲ್’ನಲ್ಲಿ ಟ್ರಾಫಿಕ್ ರೂಲ್ಸ್ ಚೇಂಜ್
ಶಿವಪ್ಪನಾಯಕ ವೃತ್ತದಲ್ಲಿ ಭಾರಿ ವಾಹನಗಳ ಸಾಗಾಟವಿದ್ದು ಅಪಘಾತಗಳು ಸಂಭವಿಸುತ್ತವೆ. ಇಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುವುದು. ವಾಹನಗಳನ್ನು ಸರದಿಯಲ್ಲಿ ನಿಲ್ಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಗಣಪತಿ ದೇವಾಲಯದ ವೃತ್ತವನ್ನೂ ಒಳಗೊಂಡಂತೆ ಸಾಗರದ ಐದು ಪ್ರಮುಖ ವೃತ್ತಗಳಲ್ಲಿ ಎಲ್ಇಡಿ ದೀಪದ ವ್ಯವಸ್ಥೆ ಮಾಡಲಾಗುತ್ತದೆ. ಅಗತ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗುತ್ತಿದೆ.
ಗಾಂಜಾ, ಕೆಮ್ಮಿನ ಔಷಧಿ
ಸಾಗರ ನಗರದ ಕೆಲವು ಭಾಗಗಳಲ್ಲಿ ಗಾಂಜಾ ಮಾರಾಟ, ಕಾಲೇಜು ವಿದ್ಯಾರ್ಥಿಗಳು ಕೆಮ್ಮಿನ ಆಲ್ಕೊಹಾಲಿಕ್ ಲಕ್ಷಣಗಳುಳ್ಳ ಔಷಧಗಳನ್ನು ಕುಡಿದು ಮತ್ತು ಬರಿಸಿಕೊಳ್ಳುತ್ತಿರುವುದು ತಿಳಿದು ಬಂದಿದೆ ಎಂದರು.
ಒಂದು ತಿಂಗಳೊಳಗಾಗಿ ಕೆಲವು ಮಾರ್ಪಾಡು ಮಾಡಲಾಗುವುದು. ಸಾರ್ವಜನಿಕರು ನಮ್ಮೊಂದಿಗೆ ಕಾನೂನು ಸುವ್ಯವಸ್ಥೆ ಜಾರಿಗೆ ತರುವಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
Sagara Police to issue Laddu and Rose to Traffic Violation in the Taluk. If the violation continues, fine will be imposed says DySP.