ಸಾಗರದಲ್ಲಿ ತರಕಾರಿ ಮಾರಾಟಕ್ಕೆ ರೈತರಿಗೆ ಜಾಗ ಫಿಕ್ಸ್, ಎಲ್ಲೆಲ್ಲಿ ಮಾರಾಟ ಮಾಡಬಹುದು? ಟೈಮಿಂಗ್ ಏನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ
shivamogga live new logo formate

ಶಿವಮೊಗ್ಗ ಲೈವ್.ಕಾಂ | SAGARA | 21 ಏಪ್ರಿಲ್ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಲಾಕ್‍ಡೌನ್ ನೆಪದಲ್ಲಿ ರೈತರಿಗೆ ತೊಂದರೆ ಆಗಬಾರದು. ರೈತರು ಬೆಳೆದ ಬೆಳೆಯನ್ನು ಪಟ್ಟಣದಲ್ಲಿ ಮಾರಾಟಕ್ಕೆ ತಾಲೂಕು ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಲಾಗುತ್ತೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಅಭಯ ನೀಡಿದ್ದಾರೆ.

ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಶಾಸಕ ಹಾಲಪ್ಪ, ಸಾಗರ ನ್ಯಾಯಾಲಯದ ಎದುರಿನ ಒಂದು ಭಾಗ, ಜೋಗ ಖಾಸಗಿ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮುಂಭಾಗದ ಚಾಮರಾಜಪೇಟೆ ರಸ್ತೆ, ಹಳ್ಳಿಗಳಿಂದ ನಗರಕ್ಕೆ ಬರುವ ಪ್ರಮುಖ ಸರ್ಕಲ್‍ಗಳಲ್ಲಿ ರೈತರು ಬೆಳೆ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

Haratalu Halappa MLA 1 1
FILE PHOTO

ವಾರ ಪೂರ್ತಿ ಮಾರಾಟಕ್ಕೆ ಅನುಮತಿ

ರೈತರು ವಾರ ಪೂರ್ತಿ ಬೆಳೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾರಾಟ ಮಾಡಬಹುದು. ಉಳಿದಂತೆ ಪ್ರತಿ ಬಡಾವಣೆಯಲ್ಲೂ ತರಕಾರಿ ಮಾರಾಟ ಎಂದಿನಂತೆ ಇರಲಿದೆ ಅಂತಾ ಶಾಸಕ ಹಾಲಪ್ಪ ತಿಳಿಸಿದರು.

ಅಂತರ ಉಲ್ಲಂಘಿಸಿದರೆ ಶಾಶ್ವತ ಸೀಲ್

ಪಟ್ಟಣದ ಕೆಲವು ಕಡೆ ವ್ಯಾಪಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಈ ನಿಯಮ ಉಲ್ಲಂಘಿಸುವ ಅಂಡಿಗಳನ್ನು ಬಂದ್ ಮಾಡಿ, ಶಾಶ್ವತವಾಗಿ ಸೀಲ್ ಮಾಡಲಾಗುತ್ತದೆ ಎಂದು ಡಾ. ಎಲ್.ನಾಗರಾಜ್ ಎಚ್ಚರಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ಡಿವೈಎಸ್‍ಪಿ ವಿನಾಯಕ್ ಶೆಟ್ಟಿಗಾರ್, ಪೌರಾಯುಕ್ತ ನಾಗಪ್ಪ, ಟಿಹೆಚ್‍ಒ ಡಾ.ಕೆ.ಎಸ್.ಮೋಹನ್, ತಾಲೂಕು ಪಂಚಾಯಿತಿ ಇಒ ಪುಷ್ಪಾ ಕಮ್ಮಾರ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.

93646688 848288912317687 2095097386429841408 n.jpg? nc cat=106& nc sid=110474& nc ohc=vWnUhG1RXTwAX O9tkd& nc ht=scontent.fblr1 3
92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment