ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA | 12 ಡಿಸೆಂಬರ್ 2019
ಸೌದಿ ಅರೇಬಿಯಾದಲ್ಲಿ ಆರು ದಿನದ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ತನ್ನ ಸ್ನೇಹಿತನೊಬ್ಬನಿಗೆ ಸಹಾಯ ಕೋರಿ ಸಾಗರದ ಸಾಮಾಜಿಕ ಕಾರ್ಯಕರ್ತ ಜಮೀಲ್ ಪ್ರಧಾನಿ ಮೋದಿ ಅವರಿಗೆ ಟ್ವಿಟ್ ಮಾಡಿದ್ದು, ಪ್ರಧಾನಿ ಕಚೇರಿ ಇದಕ್ಕೆ ಪ್ರತಿಕ್ರಿಯಿಸಿದೆ.
ಉತ್ತರಪ್ರದೇಶದ ಲಖ್ನೋದ ಅಖ್ತರ್ ಅಹಮದ್ ಎಂಬಾತ ಜಮೀಲ್ ಅವರ ಸಹೋದರನ ಸ್ನೇಹಿತ. ಇಬ್ಬರೂ ಜತೆಗೆ ಕೆಲಸ ಮಾಡುತ್ತಿದ್ದಾರೆ, ಆರು ದಿನಗಳ ಹಿಂದೆ ರಸ್ತೆ ಅಪಘಾತದಿಂದ ಅಖ್ತರ್ ತೀವ್ರ ಗಾಯಗೊಂಡಿದ್ದು ಸಹೋದರನ ಕೋರಿಕೆ ಮೇರೆಗೆ ಪ್ರಧಾನಿ ಅವರಿಗೆ ದಯಮಾಡಿ ಸಹಾಯ ಮಾಡಿ ಎಂದು ಕೋರಿದ್ದಾರೆ. ಜತೆಗೆ ಆಸ್ಪತ್ರೆ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಕರೆ ಮಾಡಿ ವಿವರಣೆ ಕೇಳಿದ್ದಾರೆ.
ವಿದೇಶಾಂಗ ಸಚಿವರಿಗೂ ಟ್ವೀಟ್ ಮಾಡಿದ್ದರು
ಸಾಮಾಜಿಕ ಕಾರ್ಯಕರ್ತ ಜಮೀಲ್ ದುಬೈನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಅಲ್ಲಿಯ ಕಂಪನಿ ತೀವ್ರ ಕಿರುಕುಳ ನೀಡುತ್ತಿತ್ತು. ಆಗ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರಿಗೆ ಸಮಸ್ಯೆ ಕುರಿತಂತೆ ಟ್ವೀಟ್ ಮಾಡಿದಾಗ, ಭಾರತದ ರಾಯಭಾರ ಕಚೇರಿಯಿಂದ ಸಂಪೂರ್ಣ ವೆಚ್ಚ ಭರಿಸಿ, ನನ್ನನ್ನು ಕರ್ನಾಟಕದ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದರು ಅಂತಾರೆ ಜಮೀಲ್.
ನನ್ನ ಸ್ನೇಹಿತನೊಬ್ಬನಿಗೆ ಈ ರೀತಿ ಅಪಘಾತ ಆಗಿರುವುದು ತೀವ್ರ ನೋವುಂಟು ಮಾಡಿದೆ. ಪ್ರಧಾನಿ ಮೋದಿ ಅವರಿಗೆ ಟೀಟ್ ಮಾಡಿದ್ದು ಅವರು ಸಹಾಯ ಮಾಡುತ್ತಾರೆ ಎಂಬ ನಂಬಿಕೆಯೂ ನನಗಿದೆ ಎನ್ನುತ್ತಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Sagara Youth Jameel tweets to Prime Minister Narendra Modi to rescue his friend who met with an accident
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422