SAGARA: ತಾಲೂಕಿನ ಕರ್ಕಿಕೊಪ್ಪದ ಯಡಜಿಗಳೆಮನೆ ಗ್ರಾಮದ ಜಮೀನೊಂದರಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳರು ಕಡಿತಲೆ ಮಾಡಿ ಕದ್ದೊಯ್ದಿರುವ ಘಟನೆ ನಡೆದಿದೆ.
ಯಡಜಿಗಳೇಮನೆ ಗ್ರಾಮದ ರೈತ ರಾಮಚಂದ್ರ ವಿ. ಭಟ್ ಎಂಬುವವರ ಜಮೀನಿನಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಶ್ರೀಗಂಧದ ಮರ ಕಳ್ಳತನವಾಗಿದೆ. ಮನೆಯ ಬಳಿಯೇ ಇದ್ದ ದೊಡ್ಡ ಶ್ರೀಗಂಧದ ಮರಕ್ಕೆ ಸುರಕ್ಷತೆಗಾಗಿ ಟೀ ಗಾರ್ಡ್ ಅಳವಡಿಸಲಾಗಿತ್ತು. ಮೇ 24ರ ಬೆಳಗಿನ ಜಾವ ಮನೆಯವರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು, ಮರವನ್ನು ಕತ್ತರಿಸಿ ತಗೆದುಕೊಂಡು ಹೋಗಿದ್ದಾರೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಇದೊಂದು ಮುಖ್ಯ ಸುದ್ದಿ⚡ ಮೂವರು ಮಕ್ಕಳೊಂದಿಗೆ ಶಿವಮೊಗ್ಗದಲ್ಲಿ ತುಂಗಾ ನದಿಗೆ ಹಾರಿದ ಚಿತ್ರದುರ್ಗದ ಮಹಿಳೆ, ಆಗಿದ್ದೇನು?
ಕಳುವಾದ ಮರದ ಮೌಲ್ಯ ₹30,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
