ಸಿಗಂದೂರು ದೇಗುಲದ ಭಕ್ತರಿಗೆ ಗುಡ್‌ ನ್ಯೂಸ್‌, ಇನ್ಮುಂದೆ ದರ್ಶನದ ಸಮಯ ಹೆಚ್ಚಳ

ಸಾಗರ: ಸಿಗಂದೂರು ಸೇತುವೆ (Sigandur) ಲೋಕಾರ್ಪಣೆ ಬೆನ್ನಿಗೆ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗಿದೆ. ದೇವಿಯ ದರ್ಶನಕ್ಕೆ ಅನುಕೂಲವಾಗಲಿ ಎಂದು ದರ್ಶನದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ತಾಲೂಕಿನ ಶಾಲೆ, ಕಾಲೇಜುಗಳಿಗೆ ಜು.26ರಂದು ರಜೆ

ಸಿಗಂದೂರು ದೇವಿ ದರ್ಶನದ ಅವಧಿಯನ್ನು ಒಂದೂವರೆ ಗಂಟೆ ಹೆಚ್ಚಳ ಮಾಡಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದಾಗಿದೆ.

ದರ್ಶನದ ಸಮಯ ಏನು?

ಈಗ ರಾತ್ರಿ 9 ಗಂಟೆವರೆಗು ಸಿಗಂದೂರು ದೇವಿ ದರ್ಶನ ಪಡೆಯಬಹುದಾಗಿದೆ. ಸಿಗಂದೂರು ದೇಗುಲದ ಆಡಳಿತ ಮಂಡಳಿ ಸಮಯ ವಿಸ್ತರಣೆ ಮಾಡಿ ಆದೇಶಿಸಿದೆ. ಈ ಕುರಿತು ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್‌ ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿದ್ದಾರೆ.

ಸಿಗಂದೂರು ದೇವಿಯ ದರ್ಶನಕ್ಕೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಅವಕಾಶವಿರಲಿದೆ. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನವಿರಲಿದೆ. ಈ ಮೊದಲು ರಾತ್ರಿ 7.30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು. ಇನ್ನು, ಭಕ್ತರಿಗೆ ಮೂರು ಹೊತ್ತಿನ ಪ್ರಸಾದ ಇರಲಿದೆ.ರವಿಕುಮಾರ್‌, ಸಿಗಂದೂರು ದೇಗುಲದ ಕಾರ್ಯದರ್ಶಿ

Siganduru-Temple-Sagara

ಸಮಯ ವಿಸ್ತರಣೆಗೆ ಕಾರಣವೇನು?

POINT-1ಸಿಗಂದೂರು ದೇಗುಲಕ್ಕೆ ಬರುವ ಭಕ್ತರು ಈ ಮೊದಲು ಲಾಂಚ್‌ ಮೂಲಕ ಶರಾವತಿ ಹಿನ್ನೀರು ದಾಟಬೇಕಿತ್ತು. ಸಂಜೆ 6 ಗಂಟೆವರೆಗೆ ಲಾಂಚ್‌ ವ್ಯವಸ್ಥೆ ಇರುತಿತ್ತು. ಭಾನುವಾರ ಅಥವಾ ವಿಶೇಷ ಸಂದರ್ಭ ಮಾತ್ರ ಲಾಂಚ್‌ ಸೇವೆ ಸ್ವಲ್ಪ ಹೆಚ್ಚಿನ ಹೊತ್ತು ಇರುತಿತ್ತು.

POINT-2ತಡರಾತ್ರಿ ಬಂದ ಭಕ್ತರಿಗೆ ಸಿಗಂದೂರಿನಲ್ಲಿ ತಂಗಲು ಸಮಸ್ಯೆಯಾಗುತಿತ್ತು. ಸ್ವಂತ ವಾಹನದಲ್ಲಿ ಬಂದವರು ಸುತ್ತಿ ಬಳಸಿ ಸಾಗರ ತಲುಪಬಹುದಾಗಿತ್ತು. ಈ ಹಿನ್ನೆಲೆ ದೇವಿಯ ದರ್ಶನದ ಅವಧಿಯನ್ನು ರಾತ್ರಿ 7.30ರವರೆಗೆ ನಿಗದಿಪಡಿಸಲಾಗಿತ್ತು.

June-2025-Report-Shivamogga-Live-New-New.

POINT-3ಸಿಗಂದೂರು ಸೇತುವೆ ಲೋಕಾರ್ಪಣೆ ಆದ ಬಳಿಕ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ರಾತ್ರಿ ಬಹು ಹೊತ್ತಿನವರೆಗೆ ದೇಗುಲಕ್ಕೆ ಬಂದು ದರ್ಶನ ಪಡೆಯಲು ಅವಕಾಶವಾಗಿದೆ. ಇದೇ ಕಾರಣಕ್ಕೆ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ರಾತ್ರಿ 9.30ರವರೆಗೆ ಭಕ್ತರು ದರ್ಶನ ಪಡೆಯಬಹುದಾಗಿದೆ.

ಸಿಗಂದೂರು ‍ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ರಜೆ ದಿನಗಳು, ವಿಶೇಷ ಸಂದರ್ಭದಲ್ಲಿ ಇಲ್ಲಿ ಭಕ್ತರು ದ್ವಿಗುಣಗೊಳ್ಳುತ್ತಿದ್ದರು. ಸೇತುವೆ ಲೋಕಾರ್ಪಣೆ ಬಳಿಕ ಭಕ್ತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ.

Siganduru-Temple-Sagara

Leave a Comment