ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 2 ಆಗಸ್ಟ್ 2021
ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಇವತ್ತು ಶರಾವತಿಗೆ ನದಿಗೆ ಬಾಗಿನ ಅರ್ಪಿಸಿ, ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರು ಹೊರಗೆ ಬಿಡಲಾಯಿತು.
ಇವತ್ತು ಬೆಳಗ್ಗೆ ಕೆಪಿಸಿ ಅಧಿಕಾರಿಗಳು ಶರಾವತಿ ನದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಾಗಿನ ಅರ್ಪಣೆ ಮಾಡಿದರು. ಕೆಪಿಸಿ ಅಧಿಕಾರಿಗಳು, ಅವರ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೇಟ್ ನಿಂದ ನೀರು ಹೊರಗೆ
ಲಿಂಗನಮಕ್ಕಿ ಜಲಾಶಯದ ಗೇಟ್ನಿಂದ ಇವತ್ತು ಸಾಂಪ್ರದಾಯಿಕವಾಗಿ ಕೆಲವು ನಿಮಿಷ ನೀರು ಹೊರಗೆ ಬಿಡಲಾಯಿತು. ಜಲಾಶಯ ಅರ್ಧ ಭರ್ತಿಯಾದ ಬಳಿಕ ಒಂದು ಗೇಟ್ ಮೂಲಕ ಸ್ವಲ್ಪ ಪ್ರಮಾಣದ ನೀರನ್ನು ಹೊಳಗೆ ಹರಿಸಲಾಗುತ್ತದೆ.
ಜಲಾಶಯದಲ್ಲಿ 1795 ಅಡಿ ನೀರು ಸಂಗ್ರಹವಾದರೆ, ಅರ್ಧ ಭರ್ತಿಯಾದಂತಾಗಲಿದೆ. ಇಷ್ಟು ನೀರು ಸಂಗ್ರಹವಾದರೆ ಗೇಟ್ ಮಟ್ಟಕ್ಕೆ ನೀರು ಬರುತ್ತದೆ. ಆ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ಗೇಟ್ನಿಂದ ಸ್ವಲ್ಪ ಪ್ರಮಾಣದ ನೀರು ಹೊರಗೆ ಹರಿಸಲಾಗುತ್ತದೆ.
ಇವತ್ತು ಎಷ್ಟಿದೆ ನೀರು?
ಶರಾವತಿ ನದಿ ಭಾಗದಲ್ಲಿ ಕಳೆದ ತಿಂಗಳು ಭಾರಿ ಮಳೆಯಾಗಿದೆ. ಈ ಹಿನ್ನಲೆಯಲ್ಲಿ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟ ಬಹುಬೇಗ ಏರಿಕೆಯಾಗಿದೆ. 1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಇವತ್ತು 1807.20 ಅಡಿಯಷ್ಟು ನೀರಿನ ಸಂಗ್ರಹವಿದೆ. 14481 ಕ್ಯೂಸೆಕ್ ಒಳಹರಿವು ಇದೆ. ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಭಾಗದಲ್ಲಿ 3.40 ಮಿ.ಮೀ ಮಳೆಯಾಗಿದೆ. ಇದರಿಂದ ಜಲಾಶಯದ ಒಳ ಹರಿವು ಇನ್ನಷ್ಟು ಹೆಚ್ಚಳವಾಗುವ ಸಂಭವವಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422