ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಸಾಗರ | 2 ಸೆಪ್ಟೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಲಿಂಗನಮಕ್ಕಿ ಜಲಾಶಯ ಭರ್ತಿಯಾದ ಹಿನ್ನೆಲೆ ಮೂರು ಕ್ರಸ್ಟ್ ಗೇಟುಗಳನ್ನು ತೆಗೆದು ನೀರು ಹೊರಬಿಡಲಾಗುತ್ತಿದೆ. ಸಂಜೆ 6.30ಕ್ಕೆ ಮೂರು ಕ್ರಸ್ಟ್ ಗೇಟುಗಳನ್ನು ಒಂದು ಅಡಿಯಷ್ಟು ಮೇಲಕ್ಕೆತ್ತಲಾಗಿದೆ.
ಮೂರು ಗೇಟುಗಳ ಮೂಲಕ 4800 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಸದ್ಯ ನೀರಿನ ಮಟ್ಟ 1818.40 ಅಡಿಗೆ ತಲುಪಿದೆ. ಪೂರ್ಣ ಭರ್ತಿಗೆ ಇನ್ನು ಅರ್ಧ ಅಡಿಯಷ್ಟು ಬಾಕಿ ಇದೆ. ಒಳಹರಿವು 25 ಸಾವಿರ ಕ್ಯೂಸೆಕ್ ಇದೆ.
ಮಳೆ ಹೆಚ್ಚಾದರೆ ಮತ್ತಷ್ಟು ನೀರು ಹೊರಗೆ
ಜಲಾನಯನ ಪ್ರದೇಶ ಹೊಸನಗರ ಮತ್ತು ಸಾಗರದಲ್ಲಿ ಸತತ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟು ಪೂರ್ಣ ತುಂಬುವ ಮೊದಲೇ ಕ್ರಸ್ಟ್ ಗೇಟ್’ಗಳ ಮೂಲಕ ಅಲ್ಪ ಪ್ರಮಾಣದಲ್ಲಿ ನೀರು ಹೊರಬಿಡಲು ನಿರ್ಧರಿಸಲಾಗಿದೆ. ಮಳೆ ಪ್ರಮಾಣ ಹೆಚ್ಚಾದರೆ ಅಧಿಕ ನೀರನ್ನು ಹೊರಬಿಡಲಾಗುತ್ತದೆ ಎಂದು ಕೆಪಿಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಗಮ) ಅಧಿಕಾರಿಗಳು ತಿಳಿಸಿದ್ದಾರೆ.
ಮೈದುಂಬಲಿದೆ ಜೋಗ ಜಲಪಾತ
ಲಿಂಗನಮಕ್ಕಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರಬಿಟ್ಟರೆ, ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬರಲಿದೆ. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಎದುರು ನೋಡುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | [email protected]
Great post.