SAGARA, 11 AUGUST 2024 : ಆವಿನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ನೆರವಾಗಲು ಆತನ ಸ್ನೇಹಿತರು ವಾಟ್ಸಪ್ ಗ್ರೂಪ್ (WhatsApp Group) ಆರಂಭಿಸಿದ್ದಾರೆ. ವಿವಿಧೆಡೆಯ ನೆರವು ಹೆರಿದು ಬರುತ್ತಿದೆ.
ಸಚಿನ್ ಹೆಸರಲ್ಲಿ ವಾಟ್ಸಪ್ ಗ್ರೂಪ್
ಆವಿನಹಳ್ಳಿ ಬಳಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕಟ್ಟಿನಕಾರು ಗ್ರಾಮದ ಕೆ.ಪಿ.ಸಚಿನ್ (18) ಮೃತಪಟ್ಟಿದ್ದ. ಸಚಿನ್ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಸಮಾನ ಮನಸ್ಕರು ಧನ ಸಂಗ್ರಹ ಆರಂಭಿಸಿದ್ದಾರೆ. ‘ಸಚಿನ್ ಪಡಬೀಡು ಇವರ ಉಸಿರಿಗೊಂದು ಆಸರೆಯಾಗಿ ನಾವುಗಳುʼ ಎಂಬ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಕ್ರಿಯೇಟ್ ಮಾಡಿ, ಕ್ಯೂ ಆರ್ ಕೋಡ್ ಹಂಚಲಾಗಿದೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಹೈಕೋರ್ಟ್ ನ್ಯಾಯಾಧೀಶರಿಗೆ ಪೂರ್ಣ ಕುಂಭ ಸ್ವಾಗತ, ಸಮ್ಮೇಳನದಲ್ಲಿ ಪ್ರಮುಖ ವಿಚಾರ ಚರ್ಚೆ
ಓದಿನಲ್ಲಿ ತುಂಬಾ ಚುರುಕಾಗಿದ್ದ ಹುಡುಗ ಸಚಿನ್ ಮುಂದೊಂದು ದಿನ ದೊಡ್ಡ ಮಟ್ಟಕ್ಕೇರಿ ಕುಟುಂಬಕ್ಕೆ ಆಸರೆಯಾಗಿ ಹಾಗು ಊರಿಗೆ ನೆರವಾಗುತ್ತಿದ್ದ. ಆದರೆ ಈಗ ಬದುಕಿನ ಆರಂಭದಲ್ಲೇ ನಮ್ಮನ್ನೆಲ್ಲ ಅಗಲಿದ್ದಾನೆ. ಸಚಿನ್ ತಂದೆ ತಾಯಿಗೆ ಅವರ ಮಗನ ಸ್ಥಾನವನ್ನು ಯಾರುತುಂಬಲು ಸಾಧ್ಯವಿಲ್ಲ. ಇಂತಹ ಸಂಧರ್ಭದಲ್ಲಿ ಆರ್ಥಿಕವಾಗಿ ನಾವು ಅವರ ಜೊತೆ ನಿಲ್ಲಬೇಕಾಗಿದೆ ಎಂದು ಶಿವಕುಮಾರ್ ಅವರು ವಾಟ್ಸಪ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ
ನೆರವಾಗುವುದು ಹೇಗೆ?
ನೆರವು ನೀಡುವವರು ಮೃತ ಸಚಿನ್ ತಂದೆ ಕೊಲ್ಲಪ್ಪ, ಉಳಿತಾಯ ಖಾತೆ ಸಂಖ್ಯೆ: 1949119004970, ಐಎಫ್ಎಸ್ಸಿ ಕೋಡ್: CNRB0001949 ಕೆನರಾ ಬ್ಯಾಂಕ್ ಕೋಗಾರು ಶಾಖೆ ಅಥವಾ ಮೊ: 8277249772ಗೆ ಫೋನ್ ಪೇ ಮಾಡಬಹುದು ಎಂದು ಯುವಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ನೇಣು ಬಿಗಿದು ವ್ಯಕ್ತಿ ಸಾವು, ಜೇಬಲ್ಲಿತ್ತು ಡೆತ್ ನೋಟ್, ಪತ್ರಕರ್ತ ಸೇರಿ ಇಬ್ಬರು ಅರೆಸ್ಟ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200