ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 17 ಮೇ 2020
ಸಾಗರದಲ್ಲೂ ಕರೋನ ಭೀತಿ ಎದುರಾಗಿದೆ. ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕಿತ ಮಹಿಳೆ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಹಾಗಾಗಿ ಇನ್ನಷ್ಟು ಜನಕ್ಕೆ ಕರೋನ ಹರಡುವುದು ತಡೆದಂತಾಗಿದೆ.
ಮಹಿಳೆಯ ಟ್ರಾವಲ್ ಹಿಸ್ಟರಿ ಏನು?
ಸೋಂಕಿತ ಮಹಿಳೆ 8 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಇವರು ಪತಿ, ಮೂರು ವರ್ಷದ ಮಗುವಿನ ಜೊತೆಗೆ ಮೇ 11ರಂದು ಮಹಾರಾಷ್ಟ್ರದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದರು.
ಮಹಾರಾಷ್ಟ್ರದ ವಾರ್ತಾ ಇಲಾಖೆಯಲ್ಲಿ ಮಹಿಳೆ ಉದ್ಯೋಗದಲ್ಲಿದ್ದರು. ತವರು ಮನೆ ಸಾಗರದಲ್ಲಿ ಇರುವುದರಿಂದ ಕುಟುಂಬದ ಜೊತೆಗೆ ಸಾಗರಕ್ಕೆ ಆಗಮಿಸಿದ್ದರು.
ಅಧಿಕೃತ ಪಾಸ್ ಪಡೆದುಕೊಂಡು ಶಿವಮೊಗ್ಗಕ್ಕೆ ಬರುತ್ತಿದ್ದಂತೆ ಆರೋಗ್ಯ ತಪಾಸಣೆ ನಡೆಸಿ, ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಸಾಗರದಲ್ಲಿ ಸರ್ಕಾರಿ ಹಾಸ್ಟೆಲ್ ಒಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು.
ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಿದ್ದರಿಂದ ಸ್ಥಳೀಯವಾಗಿ ಯಾರೊಂದಿಗೂ ಸಂಪರ್ಕ ಹೊಂದಿರಲಿಲ್ಲ.
ಶನಿವಾರ ಮಧ್ಯಾಹ್ನ ಲ್ಯಾಬ್ ರಿಪೋರ್ಟ್ ಬಂದ ಹಿನ್ನೆಲೆ ಮಹಿಳೆ, ಅವರ ಪತಿ ಮತ್ತು ಮೂರು ವರ್ಷದ ಮಗುವನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.
ಅಧಿಕಾರಿಗಳ ಜೊತೆಗೆ ದಿಢೀರ್ ಸಭೆ
ಸಾಗರಕ್ಕೆ ಬಂದಿದ್ದ ಮಹಿಳೆಗೆ ಕರೋನ ಪಾಸಿಟವ್ ಬಂದಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ತುರ್ತು ಕ್ರಮಗಳ ಕುರಿತು ಪರಿಶೀಲನೆ ನಡಸಿದರು. ಅಲ್ಲದೆ ಜಿಲ್ಲಾಧಿಕಾರಿಗಳ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422