BREAKING NEWS | ತಾಳಗುಪ್ಪ – ಬೆಂಗಳೂರು ರೈಲಿನಡಿ ಸಿಲುಕಿ ಯುವಕನ ಕಾಲು ಕಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | TALAGUPPA NEWS | 28 JUNE 2021

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ‌. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಾಳಗುಪ್ಪ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ತಳಗುಪ್ಪ – ಬೆಂಗಳೂರು ಪ್ಯಾಸೆಂಜರ್ ರೈಲಿಗೆ ಯುವಕ ಸಿಲುಕಿದ್ದಾನೆ.

ಹೇಗಾಯ್ತು ಘಟನೆ?

ಸಿದ್ದಾಪುರ ತಾಲೂಕಿನ ನವೀನ್ (18) ರೈಲಿಗೆ ಸಿಲುಕಿದ ಯುವಕ.

ಪ್ಲಾಟ್‌ಫಾರಂ ಜಾರುತ್ತಿದ್ದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪ್ಲಾಟ್‌ಫಾರಂನಿಂದ ಜಾರಿದ ನವೀನ್ ರೈಲಿನ ಕೆಳಗೆ ಬಿದ್ದಿದ್ದಾನೆ. ಈ ವೇಳೆ ರೈಲು ಚಲಿಸಿದ್ದರಿಂದ ನವೀನ್ ಕಾಲು ಮತ್ತು ಕೈಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ‌ ಇನ್ನಷ್ಟೆ ತಿಳಿದು ಬರಬೇಕಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment