ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿಕಾರಿಪುರ: ಕುಟ್ರಳ್ಳಿ ಟೋಲ್ (Toll Gate) ವಿರೋಧಿಸಿ ಅ.9ರಂದು ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ. ಈಗಾಗಲೇ ವರ್ತಕರು, ರೈತರು ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ.
ಶಿಕಾರಿಪುರ – ಶಿರಾಳಕೊಪ್ಪ ನಡುವೆ ಕುಟ್ರಳ್ಳಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಿಸಲಾಗಿದೆ. ಇದರಿಂದ ರೈತರು, ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದು ಆರೋಪಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರು ಸರ್ಕಾರ ಟೋಲ್ ಗೇಟ್ ತೆರವು ಮಾಡದ್ದಕ್ಕೆ ಶಿಕಾರಿಪುರ ಬಂದ್ ಮಾಡಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ಕುಟ್ರಳ್ಳಿ ಟೋಲ್ ಗೇಟ್ ತೆರವಿಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರು ಸರ್ಕಾರ ಕಣ್ತೆರೆಯುವಲ್ಲಿ ವಿಫಲವಾಗಿದೆ. ಆದ್ದರಿಂದ ಅ.9ರಂದು ಇಡೀ ಶಿಕಾರಿಪುರ ತಾಲೂಕು ಬಂದ್ ಮಾಡಲಾಗುತ್ತದೆ.
- ಶಿವರಾಜ್ ಸುಣ್ಣದಕೊಪ್ಪ, ಶಿಕಾರಿಪುರ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ
ಹೇಗಿರಲಿದೆ ಬಂದ್ ಸ್ವರೂಪ?
ಶಿಕಾರಿಪುರ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಗುತ್ತದೆ. ಅಲ್ಲಿಂದ ಪಿಎಲ್‌ಡಿ ಬ್ಯಾಂಕ್ ಮುಂಭಾಗ, ತಾಲೂಕು ಕಚೇರಿ, ದೊಡ್ಡಪೇಟೆ, ಶಿರಾಳಕೊಪ್ಪ ಸರ್ಕಲ್, ಶಿವಮೊಗ್ಗ ಸರ್ಕಲ್ ಮೂಲಕ ಮೆರವಣಿಗೆ ಸಾಗಿ ತಾಲೂಕು ಕಚೇರಿ ಮುಂಭಾಗ ತಲುಪಲಿದೆ. ಅಲ್ಲಿ ಪ್ರತಿಭಟನಾ ಸಭೆ ನಡೆಸಲಾಗುತ್ತದೆ. ಕನಿಷ್ಠ 5 ಸಾವಿರ ಜನರು ಸೇರುವ ಸಾಧ್ಯತೆ ಇದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಟೋಲ್‌ನಿಂದ ಸಮಸ್ಯೆ ಏನು? ಇಲ್ಲಿದೆ ಪಾಯಿಂಟ್ಸ್
ಶಿವಮೊಗ್ಗ ತಾಲೂಕು ಕಲ್ಲಾಪುರ, ಶಿಕಾರಿಪುರ ತಾಲೂಕು ಕುಟ್ರಳ್ಳಿಯಲ್ಲಿ ಟೋಲ್ ಗೇಟ್‌ಗಳನ್ನು ಸ್ಥಾಪಿಸಲಾಗಿದೆ. 35 ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್ ಸ್ಥಾಪಿಸಿರುವುದು ನಿಯಮ ಬಾಹಿರ ಎಂಬುದು ಹೋರಾಟ ಸಮಿತಿ ಆರೋಪ.
ಶಿರಾಳಕೊಪ್ಪದಿಂದ ಶಿವಮೊಗ್ಗಕ್ಕೆ ಬರುವವರು ಈ ಎರಡು ಟೋಲ್‌ಗಳಲ್ಲಿಯು ಹಣ ಪಾವತಿ ಮಾಡಬೇಕು.
ಖಾಸಗಿ ಬಸ್ಸುಗಳು, ಗೂಡ್ಸ್ ವಾಹನಗಳಿಗೆ ಆದಾಯ ಕಡಿಮೆಯಾಗಿದೆ. ಈಗ ಪ್ರತಿ ಟ್ರಿಪ್‌ಗು ಟೋಲ್ ಕಟ್ಟಬೇಕಿದ್ದು ಆದಾಯಕ್ಕೆ ಮತ್ತಷ್ಟು ಪೆಟ್ಟು ಬೀಳುತ್ತಿದೆ. ಇದರ ಹೊರೆಯನ್ನು ಪ್ರಯಾಣಿಕರ ಮೇಲೆ ಹೊರಿಸಬೇಕಾಗಿದೆ.
ವಿದ್ಯಾರ್ಥಿಗಳು, ರೈತರು, ಗಾರ್ಮೆಂಟ್ಸ್‌ಗೆ ತೆರಳುವ ಮಹಿಳೆಯರು, ಕಾರ್ಮಿಕರು, ವರ್ತಕರು ಹೆಚ್ಚುವರಿ ದರ ಪಾವತಿಸಿ ಬಸ್ಸು, ವಾಹನಗಳಲ್ಲಿ ಪ್ರಯಾಣಿಸಬೇಕಾಗಿದೆ. ಇದರಿಂದ ಆರ್ಥಿಕ ಸಮಸ್ಯೆಯಾಗುತ್ತಿದೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಈ ಕುರಿತು ಪ್ರತಿಭಟನೆಗಳನ್ನು ನಡೆಸಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.
ಮನೆ, ಅಂಗಡಿಗಳಿಗೆ ತೆರಳಿ ಮನವಿ
ಟೋಲ್ ಗೇಟ್‌ನಿಂದ ಸಮಸ್ಯೆಯಾಗುತ್ತಿರುವ ಹಿನ್ನೆಲೆ ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆ ಹೋರಾಟ ಸಮಿತಿ ವರ್ತಕರು, ರೈತರು, ವಿದ್ಯಾರ್ಥಿಗಳನ್ನು ಭೇಟಿಯಾಗಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದೆ. ತಾಲೂಕಿನ ಮನೆ ಮನೆಗೆ, ಅಂಡಿಗಳಿಗೆ ತೆರಳಿ ಕರಪತ್ರ ಹಂಚಿ, ಬಂದ್ ಬೆಂಬಲಿಸುವಂತೆ ತಿಳಿಸಿದ್ದಾರೆ. ಈಗಾಗಲೇ ಬಹುತೇಕ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ.

ಶಿಕಾರಿಪುರ ಬಂದ್ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಟೋಲ್ ತೆರವು ಮಾಡಬೇಕು ಎಂಬು ಈ ಭಾಗದ ಜನರ ಆಗ್ರಹ.
Toll Gate


