ಕುಟುಂಬದವರೆಲ್ಲ ಕಾರ್ಯಕ್ರಮಕ್ಕೆ ಹೋದಾಗ ಮನೆ ಬಾಗಿಲಿನ ಬೀಗ ಒಡೆದ ಕಳ್ಳರು

ಶಿರಾಳಕೊಪ್ಪ: ತಡಗಣಿ ಗೇಟ್‌ನಲ್ಲಿರುವ ಮನೆಯೊಂದರ (house) ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ನಾಗರಾಜ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯವರು ಊರಿಗೆ ಹೋದ ಸಂದರ್ಭ ಕೃತ್ಯ ನಡೆದಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ : ಪಾರ್ಟಿ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು

Shiralakoppa-Police-Station-in-Shivamogga-

ನಾಗರಾಜ ಅವರು ತಮ್ಮ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಮರುದಿನ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

Shiralakoppa-Police-Station-in-Shivamogga-

ಮನೆಯೊಳಗಿದ್ದ ಎರಡು ಬೀರುಗಳನ್ನು ಜಾಲಾಡಿದ ಕಳ್ಳರು, ಅದರಲ್ಲಿದ್ದ ಸುಮಾರು 1 ಕೆಜಿ 20 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ 13 ಗ್ರಾಂ ತೂಕದ ಚಿನ್ನದ ಆಭರಣ ದೋಚಿದ್ದಾರೆ. ಕಳುವಾದ ಒಟ್ಟು ಆಭರಣಗಳ ಅಂದಾಜು ಮೌಲ್ಯ ₹2,31,000 ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment