ಪಾರ್ಟಿ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾವು

ಕುಂಸಿ: ಸಮೀಪದ ಚನ್ನಹಳ್ಳಿಯಲ್ಲಿ ಯುವಕನೊಬ್ಬ (youth) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಸಚಿನ್‌ (21) ಮೃತ ಯುವಕ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಗ್ರಾಮಸ್ಥರೊಬ್ಬರು ಜನ್ಮ ದಿನದ ಹಿನ್ನೆಲೆ ಗ್ರಾಮದ ಹೊರಗಡೆ ಕಟ್ಟಿಸುತ್ತಿದ್ದ ಮನೆಯ ಬಳಿ ಔತಣಕೂಟ ಏರ್ಪಡಿಸಿದ್ದರು. ಇದೇ ವೇಳೆ ಸಚಿನ್ ಊಟ ಹಾಕಿಸಿಕೊಂಡು ಕಾಮಗಾರಿ ನಡೆಯುತ್ತಿದ್ದ ಮನೆಯೊಳಗೆ ಹೋಗಿದ್ದಾರೆ. ಊರಿನವರೆಲ್ಲರೂ ಊಟ ಮುಗಿಸಿಕೊಂಡು ಮನೆಗೆ ಹೋಗಿದ್ದಾರೆ.

Youth-succumbed-during-a-birthday-party-in-Kumsi-Police-station-limits

Youth-succumbed-during-a-birthday-party-in-Kumsi-Police-station-limits

ಶುಕ್ರವಾರ ಬೆಳಗ್ಗೆ ಮನೆ ಕಾಮಗಾರಿ ಮಾಡಲು ಹೋದ ಕೆಲಸಗಾರರು ನೋಡಿದಾಗ ಸಚಿನ್ ಮೃತಪಟ್ಟಿರುವುದು ಕಂಡುಬಂದಿದೆ. ವಿಷಯ ತಿಳಿದ ಸಚಿನ್ ಕುಟುಂಬಸ್ಥರು ಶವವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಗ್ರಾಮಸ್ಥರು ಕುಂಸಿ ಠಾಣೆಗೆ ವಿಷಯ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಸಚಿನ್ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಚಿನ್ ಮದ್ಯ ಸೇವಿಸಿದ್ದು, ಚಿಕನ್‌ ಮೂಳೆ ಗಂಟಲಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ಕಾರಣ ತಿಳಿಯಲಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga Live Promotion

ಇದನ್ನೂ ಓದಿ : ಕುಡಿಯುವ ನೀರಿನ ಬಾವಿಗೆ ವಿಷ, ದಾಖಲಾಯ್ತು ಪ್ರಕರಣ

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment