ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 APRIL 2024
ELECTION NEWS : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರಕ್ಕೆ ಸೆಲೆಬ್ರಿಟಿಗಳ ಎಂಟ್ರಿಯಾಗಿದೆ. ಶಿಕಾರಿಪುರ ತಾಲೂಕು ಈಸೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ನಟರಾದ ದುನಿಯಾ ವಿಜಯ್, ಚಿಕ್ಕಣ್ಣ ಮತ್ತು ಆಂಕರ್ ಅನುಶ್ರೀ ಭಾಗವಹಿಸಿದ್ದರು.
ನಟರನ್ನು ಕಣ್ತುಂಬಿಕೊಳ್ಳಲು, ಅವರ ಮಾತು ಕೇಳಲು ದೊಡ್ಡ ಸಂಖ್ಯೆಯ ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸೆಲೆಬ್ರಿಟಿಗಳ ಜೊತೆಗೆ ಫೋಟೊಗೆ ಮುಗಿಬಿದ್ದರು.
ಯಾರೆಲ್ಲ ಏನೇನು ಹೇಳಿದರು?
- ದುನಿಯಾ ವಿಜಯ್, ನಟ
ಶತ್ರುವಿನ ಕೊನೆಯ ಅಸ್ತ್ರವೆ ಅಪಪ್ರಚಾರ. ಬಿಜೆಪಿ ಬಳಿ ಇರುವುದು ಇದೊಂದೆ ಅಸ್ತ್ರ. ಸ್ವಾತಂತ್ರ್ಯ ಬಂದಾಗಿನಿಂದ ಹಿಂದು, ಮುಸ್ಲಿಮರು ಒಂದಾಗಿದ್ದೆವು. ರಾಮ ಮಂದಿರಕ್ಕೆ ನಾವೂ ಇಟ್ಟಿಗೆ ಕೊಟ್ಟಿದ್ದೇವೆ. ಮುಸ್ಲಿಮರು ದೇಣಿಗೆ ನೀಡಿದ್ದಾರೆ. ಆದರೆ ಬಿಜೆಪಿಯವರು ಹಿಂದು ಮತ್ತೆ ಮುಸ್ಲಿಮರ ಮಧ್ಯೆ ತಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ನಿಮ್ಮ ಸಮಸ್ಯೆಗಳ ಕುರಿತು ದೆಹಲಿಯಲ್ಲಿ ಧ್ವನಿಯಾಗುತ್ತಾರೆ. ಇದೇ ಕಾರಣಕ್ಕೆ ಅವರಿಗೆ ಆಶೀರ್ವಾದ ಮಾಡಬೇಕಿದೆ.
- ಅನುಶ್ರೀ, ನಿರೂಪಕಿ
ಅಪ್ಪು, ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ಅಭಿಮಾನಿಯಾಗಿ ಬಂದಿದ್ದೇನೆ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆಯಾದರು ಶಿವಣ್ಣ ಸ್ಪಂದಿಸುತ್ತಾರೆ. ಅದೇ ರೀತಿ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ತೊಂದರೆಯಾದರೂ ಅವರ ಕುಟುಂಬ ಸ್ಪಂದಿಸುತ್ತದೆ. ಜನರ ಸೇವೆ ಮಾಡಲು ಒಂದು ಅವಕಾಶ ಕೊಟ್ಟು ನೋಡಬೇಕು. ಆಕಾಶದೆತ್ತರ ಪ್ರೀತಿ ಕೊಟ್ಟು ಅವರನ್ನು ಗೆಲ್ಲಿಸಬೇಕಿದೆ.
- ಚಿಕ್ಕಣ್ಣ, ನಟ
ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಈಸೂರಿನಲ್ಲಿ ಪ್ರತಿಯೊಬ್ಬರು ಹೀರೋಗಳೆ. ಇಲ್ಲಿಗೆ ಬಂದಿರುವುದು ನಮಗೆ ಹೆಮ್ಮೆ. ಯಾವುದೆ ಬಾವಿ, ನದಿ, ಕೆರೆ ಶುದ್ಧವಾಗಿರಬೇಕು ಎಂದರೆ ಹಳೆ ನೀರು ಹೋಗಬೇಕು. ಹೊಸ ನೀರು ಬರಬೇಕು. ದುಡ್ಡು, ಹೆಸರಿಗಾಗಿ ಅಲ್ಲ ಸೇವೆ ಮಾಡಲು ಗೀತಾ ಶಿವರಾಜ್ ಕುಮಾರ್ ಅವರು ಇಲ್ಲಿಗೆ ಬಂದಿದ್ದಾರೆ. ಅವರು ಹೆಚ್ಚು ಮಾತನಾಡುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದನ್ನು ನೋಡಿದೆ. ಅಭ್ಯರ್ಥಿ ಮಾತನಾಡುವುದು ಮುಖ್ಯವಲ್ಲ. ಅವರ ಕೆಲಸ ಮಾತನಾಡಬೇಕು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಟೈಲರ್‌ಗಳಿಂದ ಮಿನಿಸ್ಟರ್‌ಗೆ ಮನವಿ, ಮೂರು ಪ್ರಮುಖ ಬೇಡಿಕೆ ಈಡೇರಿಗೆ ಒತ್ತಾಯ, ಏನೇನದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422