ಶಿವಮೊಗ್ಗ ಲೈವ್
ಶಿಕಾರಿಪುರ: ಮನೆಯಲ್ಲಿ ನೇಣು ಹಾಕಿಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಅಂಜಲಿ (30) ಮೃತರು (ಈ ಸುದ್ದಿಯನ್ನು ಇನ್ನು 18 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಕಪ್ಪನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಅಂಜಲಿ ಹಲವು ವರ್ಷಗಳ ಹಿಂದೆ ಪ್ರೇಮ ವಿವಾಹ ಆಗಿದ್ದರು. ಇಬ್ಬರೂ ಕಬಾಬ್ ಅಂಗಡಿ ನಡೆಸುತ್ತಿದ್ದರು. ದಂಪತಿಗೆ 4 ವರ್ಷದ ಗಂಡು ಮಗು, 7 ತಿಂಗಳ ಗಂಡು ಮಗು ಇದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
