ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 9 JANUARY 2023
ಶಿಕಾರಿಪುರ : ಸ್ನೇಹಿತರೊಂದಿಗೆ ಅಂಬ್ಲಿಗೊಳ್ಳ ಜಲಾಶಯಕ್ಕೆ (ambligola dam) ತೆರಳಿದ್ದ ವ್ಯಕ್ತಿಯೊಬ್ಬರು ಡ್ಯಾಂನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ನಿವಾಸಿ ಜಗದೀಶ್ (37) ನಾಪತ್ತೆ ಆದವರು. ಜಗದೀಶ್ ಅವರು ತಮ್ಮ ಸ್ನೇಹಿತರೊಂದಿಗೆ ಭಾನುವಾರ ಸಂಜೆ ಅಂಬ್ಲಿಗೊಳ್ಳ ಜಲಾಶಯಕ್ಕೆ ಬಂದಿದ್ದರು. ತಂಡದಲ್ಲಿದ್ದವರು ಅಂಬ್ಲಿಗೊಳ್ಳ ಜಲಾಶಯದಲ್ಲಿ (ambligola dam) ಈಜಲು ಮುಂದಾಗಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಗದೀಶ್ ಅವರು ಜಲಾಶಯದಲ್ಲಿ ಸ್ನಾನಕ್ಕೆ ಮುಂದಾಗಿದ್ದರು. ಈ ವೇಳೆ ಅವರು ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜಗದೀಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ – ಮಾಲೀಕಳಿಗಾಗಿ ಆಸ್ಪತ್ರೆ ಬಾಗಿಲಲ್ಲೇ ಕಾದು ಕುಳಿತ ನಾಯಿ, ಇದು ರಿಯಲ್ ಚಾರ್ಲಿ ಕಥೆ
ಅಗ್ನಿಶಾಮಕ ದಳ ಸಿಬ್ಬಂದಿ, ಮುಳುಗು ತಜ್ಞರು ಭಾನುವಾರ ರಾತ್ರಿಯವರೆಗೆ ಶೋಧ ಕಾರ್ಯ ನಡೆಸಿದ್ದರು. ಹುಡುಕಾಟದ ವೀಕ್ಷಣೆಗೆ ದೊಡ್ಡ ಸಂಖ್ಯೆಯ ಜನ ಸೇರಿದ್ದರು.