ಮುಖ್ಯರಸ್ತೆಗೆ ಮಾವಿನ ಹಣ್ಣು ಸುರಿದು ವ್ಯಾಪಾರಿಯ ಆಕ್ರೋಶ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ವಾಟ್ಸಪ್‌ ಮಾಡಲು ಕೆಳಗಿರುವ ನಂಬರ್‌ ಮೇಲೆ ಕ್ಲಿಕ್‌ ಮಾಡಿ.

NEWS HIGHLIGHTS

ಶಿರಾಳಕೊಪ್ಪ: ರಸ್ತೆ ಒತ್ತುವರಿ (Road encroachment) ಮಾಡಿಕೊಂಡಿದ್ದ ವ್ಯಾಪಾರಿಗಳನ್ನು ತೆರವು ಮಾಡುವಾಗ ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ (Shiralakoppa Main Road) ಹೈಡ್ರಾಮಾ ನಡೆದಿದೆ. ವ್ಯಾಪಾರಿಯೊಬ್ಬ ಮಾವಿನ ಹಣ್ಣುಗಳನ್ನೆಲ್ಲ ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಿರಾಳಕೊಪ್ಪದಲ್ಲಿ ಆಗಿದ್ದೇನು?

ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದಲ್ಲಿ ಕೆಲವರು ಮುಖ್ಯರಸ್ತೆಯ ಮೇಲೆಯೇ ವ್ಯಾಪಾರ ನಡೆಸುತ್ತಿದ್ದರು. ರಸ್ತೆ ಬಿಟ್ಟು ವ್ಯಾಪಾರ ನಡೆಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು (Town Panchayat officials) ವ್ಯಾಪಾರಿಗಳಿಗೆ ಸೂಚಿಸಿದರು. ಇಂದು ತೆರವು ಕಾರ್ಯಾಚರಣೆ (Eviction drive) ನಡೆಸಿದರು. ಈ ವೇಳೆ ವ್ಯಾಪಾರಿಯೊಬ್ಬ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Merchant-throws-mango-on-road-in-shiralakoppa

ರಸ್ತೆಗೆ ಮಾವಿನ ಹಣ್ಣು ಸುರಿದರು

ವ್ಯಾಪಾರಿಯೊಬ್ಬರು ಬುಟ್ಟಿಗಳಲ್ಲಿದ್ದ ಮಾವಿನ ಹಣ್ಣುಗಳನ್ನು ರಸ್ತೆಗೆ ಸುರಿದಿದ್ದಾರೆ. ಅಲ್ಲದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು (Civic workers) ಮಾವಿನ ಹಣ್ಣುಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!