ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 27 MARCH 2021
ಕಾಳೇನಹಳ್ಳಿಯ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ. ಲಿಂಗೈಕ್ಯರಾದ ರೇವಣಸಿದ್ಧ ಮಹಾಸ್ವಾಮಿ ಅವರ ಪ್ರಥಮ ಪುಣ್ಯ ಸ್ಮರಣೆ ಮತ್ತು ನೂತನ ಗುರುಗಳಾದ ಶ್ರೀ.ಮ.ನಿ.ಪ್ರ ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಪಟ್ಟಾಧಿಕಾರ ಸಮಾರಂಭ, ಮಠದ ಆವರಣದಲ್ಲಿ ನಡೆಯಿತು.
ತಿಪ್ಪಾಯಿಕೊಪ್ಪ ಶ್ರೀ ಮ.ನಿ.ಪ್ರ.ವಿರೂಪಾಕ್ಷ ಮಹಾಸ್ವಾಮೀಜಿ ಅವರು ಶ್ರೀ ಮ.ನಿ.ಪ್ರ. ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ತಿಪ್ಪಾಯಿಕೊಪ್ಪ ಶ್ರೀ ಮ.ನಿ.ಪ್ರ. ವಿರೂಪಾಕ್ಷ ಮಹಾಸ್ವಾಮೀಜಿ ಅವರು, ಲಿಂಗೈಕ್ಯರಾದ ಶ್ರೀ ಮ.ನಿ.ಪ್ರ.ರೇವಣಸಿದ್ಧ ಮಹಾಸ್ವಾಮೀಜಿ ಅವರು ನಲವತ್ತು ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದರು. ಪ್ರತಿನಿತ್ಯ ಭಕ್ತರಿಗೆ ದಾಸೋಹ, ಭಕ್ತರ ಕಷ್ಟ, ನಷ್ಟಗಳನ್ನು ಕೇಳಿ, ಸಾಂತ್ವನ ಹೇಳಿ, ಸ್ಥೈರ್ಯ ತುಂಬುತ್ತಿದ್ದರು. ಇದೆ ಕಾರಣಕ್ಕೆ ಅವರನ್ನು ಕಾಯಕ ಯೋಗಿ ಎಂದು ಭಕ್ತರು ಕರೆಯುತ್ತಿದ್ದರು ಎಂದರು.
ಇದನ್ನೂ ಓದಿ | ಶಿಕಾರಿಪುರದ ನಡೆದಾಡುವ ದೇವರು, ಶಿವಯೋಗ ಮಂದಿರದ ಸ್ವಾಮೀಜಿ ಲಿಂಗೈಕ್ಯ, ಸಿಎಂ ಸೇರಿ ಹಲವರ ಸಂತಾಪ
ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ. ಮ.ನಿ.ಪ್ರ ಡಾ.ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಲಿಂಗೈಗ್ಯರಾದ ಶ್ರೀ ರೇವಣಸಿದ್ಧ ಸ್ವಾಮೀಜಿ ಅವರೊಂದಿಗೆ ಸುದೀರ್ಘ ಒಟನಾಟವಿತ್ತು. ತಾಯಿಯೊಬ್ಬಳು ಮಗುವಿಗೆ ನೀಡುವಂತ ಪ್ರೀತಿಗಿಂತಲೂ ಹೆಚ್ಚು ಪ್ರೀತಿ ನೀಡಿದ್ದಾರೆ. ಅವರ ಸಲಹೆ, ಸಹಕಾರದಿಂದ ಮೂರು ಸಾವಿರ ಮಠದ ಪೀಠಾಧಿಪತ್ಯವನ್ನು ಮುನ್ನಡೆಸುತ್ತಿದ್ದೇನೆ ಎಂದರು.
ಆನಂದಪುರದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಳ್ಳಾರಿಯ ಹೊಸಪೇಟೆ ಕೊಟ್ಟೂರೇಶ್ವರ ಸಂಸ್ಥಾನದ ಹಾಲಕೆರೆಯ ಶ್ರೀ ಸಂಗನಬಸವ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಸಂಸದ ಬಿ.ವೈ.ರಾಘವೇಂದ್ರ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422