ಮಳೆಹಾನಿ ಪ್ರದೇಶಗಳಲ್ಲಿ ಸಂಸದ ರಾಘವೇಂದ್ರ ರೌಂಡ್ಸ್, ಹತ್ತು ಕೋಟಿ ಪರಿಹಾರಕ್ಕೆ ಸೂಚನೆ, ಎಲ್ಲೆಲ್ಲಿ ಭೇಟಿ ನೀಡಿದ್ದರು ಗೊತ್ತಾ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIRALAKOPPA | 23 ಅಕ್ಟೋಬರ್ 2019

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಭಾರಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಕೂಡಲೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

74610084 2407851085977581 6028750343905476608 n.jpg? nc cat=110& nc oc=AQlEGC6iVXAz1VPBiXoySlPvkD Uy5JuuREXkIIfQzM2AjIMIqxiDHq5XxMNVjwbRrlZlDuz8618i5BXZtWlReAU& nc ht=scontent.fblr1 4

ಮಳೆಹಾನಿ ಪ್ರದೇಶಗಳಾದ ಶಿರಾಳಕೊಪ್ಪ, ಬೆಲವಂತನಕೊಪ್ಪ, ಬಳ್ಳಿಗಾವಿ ಮತ್ತು ಬಸವನಂದಿಹಳ್ಳಿ ಗ್ರಾಮಗಳಿಗೆ ಸಂಸದ ರಾಘವೇಂದ್ರ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. 2ನೇ ಭಾರಿ ಮಳೆಯಿಂದಾಗಿ ಕೆರೆಕಟ್ಟೆ ಒಡೆದು 10 ಕೋಟಿ ರೂ.ಗಿಂತಲು ಅಧಿಕ ಹಾನಿಯಾಗಿದೆ. 60 ವರ್ಷದಲ್ಲಿ ಇಂತಹ ಮಳೆ ಆಗಿರಲಿಲ್ಲ ಎಂದರು.

ಕೋಡಿ ಒಡೆದಿರುವ ಬಸವನಂದಿಹಳ್ಳಿ ಕೆರೆ ವೀಕ್ಷಿಸಿದ ಸಂಸದ ರಾಘವೇಂದ್ರ, ಈ ಭಾಗದಲ್ಲಿ ಎರಡನೆ ಬಾರಿಗೆ ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಮೊದಲು ಜೋಳ ಬೆಳೆದಿದ್ದರು. ಭಾರಿ ಮಳೆಯಿಂದಾಗಿ ಜೋಳ ಹಾಳಾಯಿತು. ನಂತರ ಭತ್ತದ ನಾಟಿ ಮಾಡಿದ್ದರು. ಆದರೆ ಮಳೆಯಿಂದಾಗಿ ಭತ್ತ ಕೂಡ ಹಾನಿಯಾಗಿದೆ. ಸುಮಾರು 200 ಹೆಕ್ಟೇರ್’ನಲ್ಲಿ ಬೆಳೆದಿದ್ದ ಬೆಳೆ ಹಾಳಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಅಗಡಿ ಅಶೋಕ, ತಾಲೂಲು ಪಂಚಾಯಿತಿ ಅಧ್ಯಕ್ಷ ಶಂಭು, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200

ಸುದ್ದಿಗಾಗಿ ಕರೆ ಮಾಡಿ – 9964634494

ಈ ಮೇಲ್ ಐಡಿ | shivamoggalive@gmail.com

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment