ಶಿರಾಳಕೊಪ್ಪ: ಟೋಲ್ ವಿರುದ್ಧ ಕಳೆದ ವರ್ಷದಿಂದ ಸತತ ಹೋರಾಟ ಮುಂದುವರಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕದ ಹಿನ್ನೆಲೆ ಅ.9ರಂದು ಕರೆ ನೀಡಿರುವ ಶಿಕಾರಿಪುರ ಬಂದ್‌ಗೆ (Bandh) ಶಿರಾಳಕೊಪ್ಪದಲ್ಲೂ ಬೆಂಬಲ ವ್ಯಕ್ತವಾಗಿದೆ ಎಂದು ಸಮಿತಿ ಅಧ್ಯಕ್ಷ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂದ್ ಸಂಪೂರ್ಣ ಸ್ವಯಂ ಪ್ರೇರಿತವಾಗಿದ್ದು, ಯಾವುದೇ ರಾಜಕೀಯ ಪ್ರೇರಣೆ ಇಲ್ಲ. ಶಿರಾಳಕೊಪ್ಪ ಪಟ್ಟಣದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಲು ನಿರ್ಧಾರ ಮಾಡಿದಾರೆ ಎಂದರು.
ಈ ಹೋರಾಟವು ಸಂಪೂರ್ಣ ಪಕ್ಷಾತೀತ. ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಯಾವುದೇ ಪಕ್ಷದ ಚಿಹ್ನೆಯ ಬ್ಯಾನರ್‌ಗಳು ಅಥವಾ ಬಾವುಟಗಳನ್ನು ತರಬಾರದು.
- ಪುಟ್ಟನಗೌಡ, ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ
![]()
ಪುರಸಭೆ ಮಾಜಿ ಅಧ್ಯಕ್ಷ ರಟ್ಟಿಹಳ್ಳಿ ಲೋಕೇಶ್, ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ತಾಲೂಕು ರೈತ ಸಂಘದ ಅಧ್ಯಕ್ಷ ಮುಗಳಿಕೊಪ್ಪ ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ಚಂದ್ರಶೇಖರ್, ಕೆಂಪಣ್ಣ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ » ಶಿವಮೊಗ್ಗದ ವಿದ್ಯಾನಗರ ಮೇಲ್ಸೇತುವೆ ಸರ್ಕಲ್‌ಗೆ ನಾಮಕರಣ, ನಾಮಫಲಕ ಅನಾವರಣ
