NEWS HIGHLIGHTS
ಶಿಕಾರಿಪುರ: ಶ್ರೀಲಂಕಾ ದೇಶದ ಜಾಫ್ನಾ ಮತ್ತು ಕಿಲಿನೊಚ್ಚಿ ಚುನಾವಣಾ ಜಿಲ್ಲೆಯ ಸಂಸದ ಶ್ರೀಧರನ್ ಶಿವಜ್ಞಾನಂ ನೇತೃತ್ವದ ನಿಯೋಗ ಶನಿವಾರ ಶಿಕಾರಿಪುರದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ನಿವಾಸಕ್ಕೆ ಭೇಟಿ ನೀಡಿ, ಚರ್ಚೆ ನಡೆಸಿತು.
ಇದನ್ನೂ ಓದಿ:➤ ಕಾರು ಡಿಕ್ಕಿ, ಆರು ವರ್ಷದ ಬಾಲಕ ಸಾವು
ಸೌಹಾರ್ದಯುತ ಭೇಟಿಯ ಸಂದರ್ಭ, ಶ್ರೀಲಂಕಾ ಸಂಸದ ಶ್ರೀಧರನ್ ಶಿವಜ್ಞಾನಂ ಅವರನ್ನು ಮಲೆನಾಡಿನ ಸಂಪ್ರದಾಯದಂತೆ ಸನ್ಮಾನಿಸಲಾಯಿತು. ಇದೇ ವೇಳೆ ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯ, ಉಭಯ ದೇಶಗಳ ರಾಜಕೀಯ ಹಾಗೂ ಪ್ರಾದೇಶಿಕ ಅಭಿವೃದ್ಧಿ ವಿದ್ಯಮಾನಗಳು ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಸಂಸದ ರಾಘವೇಂದ್ರ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

ಮಲೆನಾಡಿನ ಕೃಷಿ ಪದ್ಧತಿ, ಪ್ರವಾಸೋದ್ಯಮ ಹಾಗೂ ಇತಿಹಾಸದ ಬಗ್ಗೆ ಶ್ರೀಲಂಕಾ ಸಂಸದ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಅವರೊಂದಿಗೆ ಆಗಮಿಸಿದ್ದ ಶ್ರೀಲಂಕಾದ ಗಣ್ಯರು ಹಾಗೂ ಸ್ಥಳೀಯ ಭಾಗದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.