ಮಹಿಳೆಯ ಫೋಟೊ, ವಿಡಿಯೋ ವೈರಲ್ ಮಾಡುವ ಬೆದರಿಕೆ, ಆರೋಪಿಯ ಹೆಡಮುರಿ ಕಟ್ಟಿದ ಪೊಲೀಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 28 NOVEMBER 2022

ಶಿಕಾರಿಪುರ : 1 ಲಕ್ಷ ರೂ. ಹಣ ಕೊಡದಿದ್ದರೆ ವಿಡಿಯೋ, ಫೋಟೊ ವೈರಲ್ (video viral threat) ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕುತ್ತಿದ್ದವನನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಆತನ ಸ್ವಗ್ರಾಮದಲ್ಲಿಯೆ ಹೆಡೆಮುರಿ ಕಟ್ಟಿದ್ದಾರೆ.

Shimoga Nanjappa HOspital

ಬಿಹಾರ ರಾಜ್ಯ ಬೈಸಾ ಪೂರ್ಣಿಯಾ ಜಿಲ್ಲೆಯ ಚಕ್ಲ ಗ್ರಾಮದ ರಜರ್ ರಾಜಾ (22) ಬಂಧಿತ. ಈತನನ್ನು LIC HOUSIN FINANCE SHIMOGA jpgಬಿಹಾರದಲ್ಲಿ ಅರೆಸ್ಟ್ ಮಾಡಿ, ಶಿವಮೊಗ್ಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

(video viral threat)

ಏನಿದು ಪ್ರಕರಣ?

ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಮಹಿಳೆಗೆ LIKEY APP ನಲ್ಲಿ ರಜರ್ ರಾಜಾ ಎಂಬಾತನ ಪರಿಚಯವಾಗಿತ್ತು. ಈತನೊಂದಿಗೆ ಚಾಟಿಂಗ್ ಮಾಡುವ ಸಂದರ್ಭ ಮಹಿಳೆ ವಿಡಿಯೋ, ಫೋಟೊಗಳನ್ನು ಷೇರ್ ಮಾಡಿದ್ದರು. ಇದನ್ನು ಉಪಯೋಗಿಸಿಕೊಂಡು ರಜರ್ ರಾಜಾ ಬ್ಲಾಕ್ ಮೇಲ್ ಆರಂಭಿಸಿದ್ದ.

ALSO READ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ವಿಚಾರ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ

https://chat.whatsapp.com/KChu2C1bGTM2v9HmZlfIkS1 ಲಕ್ಷ ರೂ. ಹಣ ಕೊಡದಿದ್ದರೆ ವಿಡಿಯೋ, ಫೋಟೊಗಳನ್ನು ನಿಮ್ಮ ಕುಟುಂಬದವರಿಗೆ ಷೇರ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆತಂಕಕ್ಕೀಡಾದ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ತನಿಖೆ ನಡೆಸಿದ ಶಿರಾಳಕೊಪ್ಪ ಪೊಲೀಸರು, ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.

ಶಿರಾಳಕೊಪ್ಪ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment