ಶಿಕಾರಿಪುರದಲ್ಲಿ ಬೆಕ್ಕು ಕಚ್ಚಿ ಮಹಿಳೆ ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIKARIPURA, 10 AUGUST 2024 : ಸಾಕಿದ್ದ ಬೆಕ್ಕು ಕಚ್ಚಿ (Cat Bite) ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ ⇒ ನಾಗರ ಪಂಚಮಿಯಂದೆ ಹಾವು ಕಡಿದು ಬಾಣಂತಿ ಸಾವು

ಗಂಗಿಬಾಯಿ (45) ಮೃತ ಮಹಿಳೆ. ಎರಡು ತಿಂಗಳ ಹಿಂದ ಗಂಗಿಬಾಯಿ ಅವರಿಗೆ ಬೆಕ್ಕು ಕಚ್ಚಿತ್ತು. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ. ಹೀಗಾಗಿ ಅವರಲ್ಲಿ ರೇಬಿಸ್‌ ಲಕ್ಷಣ ಕಾಣಿಸಿತ್ತು. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

gangibai-succumbed-to-cat-bite-at-taralagatta.

ಗಂಗೀಬಾಯಿ ಅವರಿಗೆ ಎರಡು ತಿಂಗಳ ಹಿಂದ ಬೆಕ್ಕು ಕಚ್ಚಿತ್ತು. ಚಿಕಿತ್ಸೆ ಪಡೆದಿದ್ದ ಮಹಿಳೆ ಐದು ಇಂಜೆಕ್ಷನ್‌ ಪಡೆಯಬೇಕಿತ್ತು. ಒಂದು ಇಂಜೆಕ್ಷನ್‌ ಮಾತ್ರ ಪಡೆದಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ ⇒ ಶಿವಮೊಗ್ಗದ 73 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ಎರಡು ಲಕ್ಷ ರೂ. ದಂಡ, ಕಾರಣವೇನು?

 

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment