ಶಿವಮೊಗ್ಗ ಲೈವ್
ಶಿವಮೊಗ್ಗ: ತಾಲೂಕಿನ ಕುಂಸಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಹಳೆಯ ಪವರ್ ಕೇಬಲ್ ಹಾಗೂ ನೂತನ ಡಿ.ಪಿ. ಸ್ಟ್ರಕ್ಚರ್‌ಗಳನ್ನು ಬದಲಾಯಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಕುಂಸಿ ಹಾಗೂ ಹಾರನಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ನವೆಂಬರ್ 26 ಮತ್ತು 27 ರಂದು ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ಮಾತ್ರ ವಿದ್ಯುತ್ ಸರಬರಾಜಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ನವೆಂಬರ್ 26 ಹಾಗೂ 27 ರಂದು ನೀರಾವರಿ ಕೃಷಿ ಪಂಪ್‌ಸೆಟ್‌ಗಳಿಗೆ (ಐ.ಪಿ) ಸಂಜೆ 6 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ 3 ಫೇಸ್ ವಿದ್ಯುತ್ ನೀಡಲಾಗುವುದು.

ಎಲ್ಲೆಲ್ಲಿ ಈ ಬದಲಾವಣೆ?
- ಕುಂಸಿ ಶಾಖೆ: ಕುಂಸಿ, ಬಾಳೇಕೊಪ್ಪ, ಚಿಕ್ಕಮರಸ, ರೇಚಿಕೊಪ್ಪ, ಹಳೆ ಶಿಕಾರಿಪುರ ರಸ್ತೆ, ಹುಬ್ಬನಹಳ್ಳಿ, ಹೊಸಕೋಟೆ ದುರ್ಗಮ್ಮ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
- ಹಾರನಹಳ್ಳಿ ಶಾಖೆ: ಹಾರನಹಳ್ಳಿ, ಮಲ್ಲಾಪುರ, ರಟ್ಟೆಹಳ್ಳಿ, ಸೂತ್ತುಕೋಟೆ, ಹಿಟ್ಟೂರು, ನಾರಾಯಣಪುರ, ಬೈರನಕೊಪ್ಪ, ಮುದುವಾಲ, ವಾಲಾಕೇಶಪುರ, ದೇವಬಾಳು, ಎಡವಾಲ, ತ್ಯಾಜವಳ್ಳಿ, ಕೊನಗವಳ್ಳಿ, ಚಾಮೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ರೈತರು ಹಾಗೂ ಸಾರ್ವಜನಿಕರು ಮೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಕುಂಸಿ ಮೆಸ್ಕಾಂ ಪಾಲನೆ ಮತ್ತು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: