ಶಿವಮೊಗ್ಗದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷನ ಮೇಲೆ ಮಚ್ಚಿನಿಂದ ದಾಳಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 27 OCTOBER 2023

SHIMOGA : ಕಸ ತೆರವು ಮಾಡದ ವಿಚಾರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರ ಮೇಲೆ ಮಚ್ಚು, ದೊಣ್ಣೆಯಿಂದ ಹಲ್ಲೆ (Attack) ನಡೆಸಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್‌ ಎಂಬುವವರ ಮೇಲೆ ಹಲ್ಲೆಯಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಸ್ವಚ್ಛತೆ ಬಳಿಕ ರಸ್ತೆ ಬದಿ ಕಸ

ಹೊಳೆಬೆನವಳ್ಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿತ್ತು. ದಸರಾ ಹಬ್ಬದ ಹಿನ್ನೆಲೆ ಟ್ರಾಕ್ಟರ್‌ ಸಿಗದೆ ಕಸ ವಿಲೇವಾರಿ ವಿಳಂಬವಾಗಿತ್ತು. ಹಾಗಾಗಿ ರಸ್ತೆ ಬದಿಯಲ್ಲೇ ಕಸ ಬಿಡಲಾಗಿತ್ತು. ಇದೆ ವಿಚಾರವಾಗಿ ಇಬ್ಬರು ಗ್ರಾಮಸ್ಥರು ತಮ್ಮ ಸಂಬಂಧಿ ಪುರಲೆ ನಿವಾಸಿಯೊಬ್ಬನ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್‌ ವಿರುದ್ಧ ಜಗಳವಾಡಿದ್ದಾರೆ.

ದೇಗುಲದ ಬಳಿ ಅಟ್ಯಾಕ್

ಅ.23ರಂದು ಸಂಜೆ ದೇವಸ್ಥಾನದ ಬಳಿ ನಿಂತಿದ್ದಾಗ ಮೂವರು ಆಗಮಿಸಿ ಅವಾಚ್ಯವಾಗಿ ನಿಂದಿಸಿ ಮಚ್ಚಿನಿಂದ ಎಡ ಕಿವಿಗೆ ಹಲ್ಲೆ ನಡೆಸಿದ್ದಾರೆ. ದೊಣ್ಣೆಯಿಂದ ಹೊಡೆಯಲು ಬಂದಾಗ ತಪ್ಪಿಸಿಕೊಂಡಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ವೇಳೆ ಜಗದೀಶ್‌ ಅವರ ಸ್ನೇಹಿತರು ಜಗಳ ಬಿಡಿಸಿದ್ದಾರೆ. ಗಾಯಗೊಂಡಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್‌ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Comment