NEWS HIGHLIGHTS
ಶಿವಮೊಗ್ಗ: ಬೈಕ್ ಮತ್ತು ಟೆಂಪೋ ಟ್ರಾವೆಲರ್ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮಗ ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಜಾವಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಬೇಲಿ ಮಲ್ಲೂರು ಗ್ರಾಮದ ನಂದೀಶ (21) ಮತ್ತು ಆತನ ತಾಯಿ ಯಶೋದಾ (45) ಗಾಯಗೊಂಡವರು. ನಂದೀಶ ಹಾಗೂ ಯಶೋದಾ ಅವರು ತಮ್ಮ ಬೈಕ್‌ನಲ್ಲಿ ಜಾವಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಜಾವಳ್ಳಿಯ ಮುಖ್ಯ ರಸ್ತೆಯಿಂದ ಮಸೀದಿ ರಸ್ತೆಯ ಕಡೆಗೆ ಬೈಕ್ ತಿರುಗಿಸುವಾಗ, ಶಿವಮೊಗ್ಗ ಕಡೆಯಿಂದ ಬಂದ ಟೆಂಪೋ ಟ್ರಾವೆಲರ್ ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ತಾಯಿ ಮತ್ತು ಮಗನ ತಲೆ, ಕೈಕಾಲು ಸೇರಿ ವಿವಿಧೆಡೆ ಗಾಯವಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:➤ ರೈತನ ಮನೆ ಮುಂಭಾಗ ಇದ್ದ ರೋಟೋವೇಟರ್ ನಾಪತ್ತೆ