ಗಾಜನೂರು ಬಳಿ ಬಸ್ಸಿಗೆ ಲಾರಿ ಡಿಕ್ಕಿ, ಅದೃಷ್ಟವಶಾತ್‌ ತಪ್ಪಿದ ಅನಾಹುತ, ಆಗಿದ್ದೇನು?

ಶಿವಮೊಗ್ಗ: ಗಾಜನೂರು ಗ್ರಾಮದ ಅಗ್ರಹಾರ ಬಳಿ ಓವರ್ ಟೇಕ್ ಮಾಡಲು ಭರದಲ್ಲಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಬಸ್‌ನ ಬಲಭಾಗ ಜಖಂ ಆಗಿದ್ದು, ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶ್ರೀ ಗಣೇಶ್ ಬಸ್‌ ಶೃಂಗೇರಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಶಿವಮೊಗ್ಗ ಕಡೆಯಿಂದ ಬಂದ ಗ್ಯಾಸ್ ಸಿಲಿಂಡರ್ ಹೊತ್ತ ಲಾರಿಯೊಂದು ಮತ್ತೊಂದು ಬಸ್ಸನ್ನು ಓವರ್ ಟೇಕ್ ಮಾಡಲು ಹೋಗಿ, ಎದುರಿನಿಂದ ಬಂದ ಬಸ್‌ನ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ.

Tunga-Nagara-Police-Station-Shimoga.avif

ಬಸ್‌ನಲ್ಲಿದ್ದ ಸುಮಾರು 30 ಪ್ರಯಾಣಿಕರು ಇದ್ದರು. ಈ ಪೈಕಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಅನೀಶ್ ಅವರಿಗೂ ಸಣ್ಣಪುಟ್ಟ ಪೆಟ್ಟು ಬಿದ್ದಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.