ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 21 APRIL 2023
SHIMOGA : ತಾಲೂಕಿನ ವಿವಿಧೆಡೆ ವಿಧಾನಸಭೆ ಚುನಾವಣೆ ಚೆಕ್ಪೋಸ್ಟ್ಗಳು (Checkpost) ಮಳೆ, ಗಾಳಿಗೆ ಹಾನಿಯಾಗಿವೆ. ಟೆಂಟ್ಗಳು ಹಾರಿ ಹೋಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಿಸಿಟಿವಿ ಕ್ಯಾಮರಾಗಳು ಹಾನಿಯಾಗಿವೆ.

ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಗುರುವಾರ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಚುನಾವಣಾ ಚೆಕ್ ಪೋಸ್ಟ್ಗಳು ಹಾನಿಗೀಡಾಗಿವೆ. ಗಾಳಿ, ಮಳೆಗೆ ಚೆಕ್ ಪೋಸ್ಟ್ (Checkpost) ಟೆಂಟ್ಗಳು ಪಲ್ಟಿ ಹೊಡೆದಿವೆ. ಚೆಕ್ ಪೋಸ್ಟ್ಗೆ ನೀಡಿದ್ದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುತ್ತುಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳು ಹಾನಿಗೀಡಾಗಿವೆ.
ಇದನ್ನೂ ಓದಿ – ಶಿವಮೊಗ್ಗ, ಭದ್ರಾವತಿಯಲ್ಲಿ ಗುಡುಗು ಸಹಿತ ಮಳೆ, ನಿಟ್ಟುಸಿರು ಬಿಟ್ಟ ಜನ
ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು, ಹಂಚಿನ ಸಿದ್ದಾಪುರ, ಕೈಮರ, ವಡೇನಪುರ, ಸುತ್ತುಕೋಟೆ, ಮಡಿಕೆ ಚೀಲೂರು ಚೆಕ್ ಪೋಸ್ಟ್ಗಳು ಹಾನಿಗೀಡಾಗಿವೆ. ಟೆಂಟ್ಗಳು ಹಾನಿಯಾಗಿದ್ದರಿಂದ ಸಿಬ್ಬಂದಿ ಮಳೆಯಲ್ಲೇ ನೆನೆಯಬೇಕಾಯಿತು. ಕೆಲವೆಡೆ ವಿದ್ಯುತ್ ಕೇಬಲ್ ತುಂಡಾಗಿ ಚೆಕ್ ಪೋಸ್ಟ್ ಟೆಂಟ್ ಮೇಲೆ ಬೀಳುವಂತಾಗಿದೆ. ಹೀಗಾಗಿ ಸಿಬ್ಬಂದಿ ಆತಂಕದಲ್ಲೇ, ನಡುಗುತ್ತಲೆ ವಾಹನಗಳ ತಪಾಸಣೆ ನಡೆಸಬೇಕಾಯಿತು.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು

CLICK HERE TO JOIN SHIVAMOGGA LIVE WHATSAPP GROUP



