ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜೂನ್ 2020
ಮಹಾರಾಷ್ಟ್ರದಿಂದ ಹಿಂತಿರುಗಿದ್ದ ಐವರಿಗೆ ಕರೋನ ಸೋಂಕು ತಗುಲಿದೆ. ಇವರೆಲ್ಲ ಶಿವಮೊಗ್ಗ ತಾಲೂಕಿನ ಹಕ್ಕಿಪಿಕ್ಕಿ ಕ್ಯಾಂಪ್‍ನವರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಹಾರಾಷ್ಟ್ರದಿಂದ ಶನಿವಾರ ಹಿಂತಿರುಗಿದ್ದ ಐವರನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು. ಈ ವೇಳೆ ತಪಾಸಣೆ ನಡೆಸಿದಾಗ ಕರೋನ ಸೋಂಕು ಇರುವುದು ದೃಢವಾಗಿದೆ.
3 ವರ್ಷದ ಗಂಡು ಮಗುವಿಗೂ ಸೋಂಕು
ಮೂರು ವರ್ಷದ ಗಂಡು ಮಗು ಸೇರಿ ಐವರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. ಪಿ7265 (19 ವರ್ಷದ ಪುರುಷ), ಪಿ7266 (25 ವರ್ಷದ ಮಹಿಳೆ), ಪಿ7267 (63 ವರ್ಷದ ಪುರುಷ), ಪಿ7268 (3 ವರ್ಷದ ಗಂಡು ಮಗು), ಪಿ7269 (28 ವರ್ಷದ ಪುರುಷ) ಅವರಿಗೆ ಸೋಂಕು ತಗುಲಿದೆ.
ಹಕ್ಕಿಪಿಕ್ಕಿ ಕ್ಯಾಂಪ್ ಸೀಲ್ ಡೌನ್
ಕೆಲ ದಿನದ ಹಿಂದ ಮಹಾರಾಷ್ಟ್ರದಿಂದ ಹಿಂತಿರುಗಿ, ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮನೆಗೆ ತೆರಳಿದ್ದ ಮೂವರಿಗೆ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಹಕ್ಕಿಪಿಕ್ಕಿ ಕ್ಯಾಂಪನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆದರೆ ನಿನ್ನೆ ಸೋಂಕು ಕಾಣಿಸಿಕೊಂಡ ಐವರು ಕ್ವಾರಂಟೈನ್‍ನಲ್ಲಿದ್ದಾಗಲೇ ಸೋಂಕು ಕಾಣಿಸಿಕೊಂಡಿದೆ.
ಕ್ವಾರಂಟೈನ್ ನಿಯಮ ಪಾಲಿಸುವಂತೆ ಖಡಕ್ ವಾರ್ನಿಂಗ್
ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಿದ್ದರೂ, ಹಕ್ಕಿಪಿಕ್ಕಿ ಕ್ಯಾಂಪ್‍ನ ನಿವಾಸಿಗಳು ಅಕ್ಕಪಕ್ಕದ ಊರುಗಳಿಗೆ ತೆರಳುತ್ತಿರುವುದು, ಕ್ವಾರಂಟೈನ್ ನಿಯಮ ಉಲ್ಲಂಘಿಸುತ್ತಿರುವ ದೂರುಗಳು ಬರುತ್ತಿದ್ದವು. ಇತ್ತೀಚೆಗಷ್ಟೇ ಪಕ್ಕದ ಊರಿನ ಮನೆಯೊಂದರ ಮೇಲೆ ಕಲ್ಲು ತೂರಿ, ಕಾರಿನ ಗ್ಲಾಸ್ ಪುಡಿ ಮಾಡಿ, ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]