ಮಣಿಪಾಲದಿಂದ ಶಿವಮೊಗ್ಗದ ಮನೆಗೆ ಹಿಂತಿರುಗಿದಾಗ ಹೆಂಚು ತೆಗೆದಿತ್ತು, ಸಿಲಿಂಡರ್‌ ಕಾಣೆಯಾಗಿತ್ತು

 ಶಿವಮೊಗ್ಗ  LIVE 

ಶಿವಮೊಗ್ಗ: ಮನೆಯೊಂದರ ಹೆಂಚು ತೆಗೆದು ಗ್ಯಾಸ್‌ ಸಿಲಿಂಡರ್‌, ಮೊಬೈಲ್‌ ಫೋನ್‌ ಮತ್ತು ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಬನ್ನಿಕೆರೆ ಗ್ರಾಮದ ಮುಜಾಹಿದಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ (looted).

ಮುಜಾಹಿದಾ ಅವರ ಪತಿಗೆ ಆರೋಗ್ಯ ಸಮಸ್ಯೆಯಾಗಿತ್ತು. ಮಣಿಪಾಲದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಅಲ್ಲಿಂದ ವಾಪಸ್‌ ಬಂದಾಗ ಮನೆಯ ಹೆಂಚು ತೆಗೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ ಭಾರತ್‌ ಗ್ಯಾಸ್‌ ಕಂಪನಿಯ ಸಿಲಿಂಡರ್‌, ಬೀರುವಿನಲ್ಲಿಟ್ಟಿದ್ದ ₹10,000 ನಗದು, ರೆಡ್‌ ಮೀ ಮೊಬೈಲ್‌ ಫೋನ್ ಕಳ್ಳತನವಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಹೊಸ ವರ್ಷದ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿದ ಯುವಕರು, ಚೇರ್‌ಗಳಿಂದಲೇ ಬಡಿದಾಟ

House looted

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment