ಡಿಕ್ಕಿ ಹೊಡೆದು ಆಟೋ ಮೇಲೆ ಹತ್ತಿ ನಿಂತ ಕೆಎಸ್‌ಆರ್‌ಟಿಸಿ ಬಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA | ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆ ಬದಿ‌ ನಿಂತಿದ್ದ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದಿದೆ. ಪಲ್ಟಿಯಾದ ಆಟೋದ ಮೇಲೆ ಹತ್ತಿ ನಿಂತಿದೆ.

Shimoga Nanjappa Hospital

ಶಿವಮೊಗ್ಗ ತಾಲೂಕು ಚೋರಡಿಯಲ್ಲಿ ಘಟನೆ ಸಂಭವಿಸಿದೆ. ಸಾಗರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿದೆ.

ಹೇಗಾಯಿತು ಅಪಘಾತ?

ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಸರ್ಕಾರಿ ಬಸ್‌ಗೆ ಬೈಕ್ ಅಡ್ಡ ಬಂದಿದೆ. ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಬಸ್ ಚಾಲಕ ಯತ್ನಿಸಿದ್ದಾರೆ. ಈ ವೇಳೆ ರಸ್ತೆ ಪಕ್ಕ ನಿಂತಿದ್ದ ಗೂಡ್ಸ್ ಆಟೋಗೆ ಬಸ್ ಡಿಕ್ಕಿಯಾಗಿದೆ.

ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಗೂಡ್ಸ್ ಆಟೋ ಪಲ್ಟಿ ಹೊಡೆದಿದೆ. ಆಟೋ ಮೇಲೆ ಬಸ್ ಹತ್ತಿ ನಿಂತಿದೆ. ಅದೃಷ್ಟವಶಾತ್ ಯಾವುದೆ ಸಾವು – ನೋವು ಸಂಭವಿಸಿಲ್ಲ. ಬಸ್ಸಿನಲ್ಲಿದ್ದ ಪ್ರಯಾಣಿಕರು ಕೂಡ ಪಾರಾಗಿದ್ದಾರೆ.

ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ | ರೈಲಿಗೆ ಸಿಲುಕಿ ಯುವಕ ಸಾವು, ಸ್ಥಳಕ್ಕೆ ಪೊಲೀಸರ ಭೇಟಿ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 29, 2022

Leave a Comment