ಮತ್ತೂರು ಚಾನಲ್‌ ಬಳಿ ಅಪಘಾತ, ಕಾರ್ಮಿಕನ ಕಾಲಿನ ಮೂಳೆ ಕಟ್‌, ತಲೆಗೆ ಗಾಯ

ಶಿವಮೊಗ್ಗ: ಮತ್ತೂರು ಚಾನಲ್ ಸಮೀಪ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿದ್ದು, ಕಾರ್ಮಿಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೂರು ಗ್ರಾಮದ ನಾಗೇಶ (26) ತೀವ್ರ ಗಾಯಗೊಂಡಿದ್ದಾರೆ. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ನಾಗೇಶ ಅವರು ಕೆಲಸಕ್ಕೆ ಸಿದ್ಧರಹಳ್ಳಿಗೆ ತಮ್ಮ ಬೈಕಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಡೆಕಲ್‌ ಕಡೆಯಿಂದ ಶಿವಮೊಗ್ಗ ಕಡೆಗೆ ಬಂದ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಗೇಶ ಅವರ ತೊಡೆ ಹಾಗೂ ಪಾದದ ಮೂಳೆ ಮುರಿದಿದ್ದು, ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯವಾಗಿದೆ ಎಂದು ಆರೋಪಿಸಲಾಗಿದೆ.

ACCIDENT-NEWS-GENERAL-IMAGE.

ಸ್ಥಳೀಯರು ನಾಗೇಶ್‌ ಅವರನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ಹಾಗೂ ಶಿವಮೊಗ್ಗದ ಅಮೃತ್ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.