ರೈಲು ನಿಲ್ಲಿಸ್ತಿಲ್ಲ, ಟಿಕೆಟ್‌ಗಳನ್ನು ಕೊಡ್ತಿಲ್ಲ, ರೈಲು ತಡೆಗೆ ಮುಂದಾದ ಕುಂಸಿ ಗ್ರಾಮಸ್ಥರು | VIDEO REPORT

Published On : ಫೆಬ್ರವರಿ 26, 2021

Published By : ನಿತಿನ್‌ ಆರ್‌.ಕೈದೊಟ್ಲು 

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA TALUK NEWS | 26 FEBRUARY 2021

ಕುಂಸಿಯಲ್ಲಿ ರೈಲುಗಳ ನಿಲುಗಡೆ ಮಾಡಬೇಕು, ಇಲ್ಲಿನ ನಿಲ್ದಾಣದಲ್ಲಿ ಟಿಕೆಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಕುಂಸಿ ರೈಲ್ವೆ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಯಿತು.

ರೈಲು ತಡೆಗೆ ಯತ್ನ

ಶಿವಮೊಗ್ಗ – ತಾಳಗುಪ್ಪ ನಡುವೆ ಸಂಚರಿಸುವ ಎಲ್ಲಾ ರೈಲುಗಳು ಕುಂಸಿಯಲ್ಲಿ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಿ, ರೈಲು ತಡೆಗೆ ಗ್ರಾಮಸ್ಥರು, ವಿವಿಧ ಸಂಘಟನೆಗಳ ಪ್ರಮುಖರು ಮುಂದಾದರು. ಆದರೆ ಗ್ರಾಮಸ್ಥರು ರೈಲ್ವೆ ನಿಲ್ದಾಣದೊಳಗೆ ಪ್ರವೇಶಿಸದಂತೆ ಪೊಲೀಸರು ತಡೆದರು. ಹಾಗಾಗಿ ನಿಲ್ದಾಣದ ಮುಂದೆಯೇ ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರ ಬೇಡಿಕೆ ಏನು?

ಕುಂಸಿಯಲ್ಲಿ ಯಾವುದೆ ರೈಲುಗಳ ನಿಲುಗಡೆ ಇಲ್ಲ. ಊರಲ್ಲಿ ರೈಲ್ವೆ ನಿಲ್ದಾಣವಿದ್ದರೂ ಬೇರೆ ನಿಲ್ದಾಣಗಳಲ್ಲಿ ರೈಲು ಇಳಿದು ಊರು ತಲುಪುಬೇಕಾಗಿದೆ. ಇದರಿಂದ ತಮಗೆ ಅನುಕೂಲವಾಗುತ್ತಿಲ್ಲ.

ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ವಿತರಣೆ ಮಾಡುತ್ತಿಲ್ಲ. ಬೆಂಗಳೂರಿಗೆ ತೆರಳಬೇಕು ಎಂದರೆ ಟಿಕೆಟ್‍ ಪಡೆಯಲು ಬೇರೆ ನಿಲ್ದಾಣಕ್ಕೆ ಹೋಗಬೇಕಾಗಿದೆ.

ನಿಲ್ದಾಣದಲ್ಲಿ ಮೂಲಸೌಕರ್ಯಗಳಿಲ್ಲ. ರೈಲುಗಳು ಇಲ್ಲಿ ನಿಲ್ಲಿಸಿದರೂ ಮೂಲ ಸಕೌರ್ಯದ ಸಮಸ್ಯೆ ಇದೆ. ಇದನ್ನು ಬಗೆಹರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂಬಂಧ ರೈಲ್ವೆ ಇಲಾಖೆಯ ಸೆಕ್ಷನ್ ಆಫೀಸರ್ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

VIDEO REPORT

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಫೆಬ್ರವರಿ 26, 2021

Leave a Comment