ಲಕ್ಕಿನಕೊಪ್ಪದಲ್ಲಿ ಬಾಲಕಿ ಪಾಲಿಗೆ ಉರುಳಾದ ಜೋಕಾಲಿ, ಆಗಿದ್ದೇನು?

ಶಿವಮೊಗ್ಗ: ಜೋಕಾಲಿ (makeshift swing) ಆಡುತ್ತಿದ್ದ ವೇಳೆ ಆಕಸ್ಮಿಕವಾಗಿ ಪಂಚೆ ಕೊರಳಿಗೆ ಬಿಗಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆ. ಬಾಲಕಿಯು ಬೇಸಿಗೆ ರಜೆ ಕಳೆಯಲು ಚಿಕ್ಕಮ್ಮನ ಮನೆಗೆ ಬಂದಿದ್ದಾಗ ದಾರುಣ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಘಟನೆ ನಡೆದಿದೆ. ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರಣಮ್ಯ (9) ಮೃತಪಟ್ಟ ದುರ್ದೈವಿ.

Lakkinakoppa-Village-in-Shimoga-taluk

ರಜೆ ಕಳೆಯಲು ಬಂದಿದ್ದ ಬಾಲಕಿ

ಲಕ್ಕಿನಕೊಪ್ಪದಲ್ಲಿ ಮೂರು ದಿನದ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ರಜೆಯ ಹಿನ್ನೆಲೆ ಪ್ರಣಮ್ಯ ಲಕ್ಕಿನಕೊಪ್ಪದಲ್ಲಿರುವ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಮನೆಯ ಕೊಠಡಿಯೊಂದರಲ್ಲಿ ಬಾಗಿಲು ಹಾಕಿಕೊಂಡು ಪಂಚೆಯನ್ನು ಬಳಸಿ ಜೋಕಾಲಿ ಮಾಡಿಕೊಂಡು ಆಡುತ್ತಿದ್ದಳು ಎನ್ನಲಾಗಿದೆ.

Lakkinakoppa-Village-in-Shimoga-taluk

ಉರುಳಾದ ಪಂಚೆಯ ಜೋಕಾಲಿ

ಜೋಕಾಲಿ ಆಡುವ ಸಂದರ್ಭ ಪಂಚೆಯು ಆಕಸ್ಮಿಕವಾಗಿ ಕೊರಳಿಗೆ ಉರುಳಾಗಿ ಬಿಗಿದಿದೆ. ಇದರಿಂದಾಗಿ ಬಾಲಕಿ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ KSRTC ನಿಲ್ದಾಣದಲ್ಲಿ ವಿಷ ಸೇವಿಸಿದ ಯುವಕ, ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment