ಹಣಗೆರೆಯಿಂದ ಆಯನೂರಿಗೆ ಬಸ್ಸಿನಲ್ಲಿ ಪ್ರಯಾಣ, ಆಭರಣದ ಅಂಗಡಿಗೆ ತೆರಳಿದಾಗ ಮಹಿಳೆಗೆ ಕಾದಿತ್ತು ಆಘಾತ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ: ಹಣಗೆರೆಯಿಂದ ಆಯನೂರಿಗೆ ಖಾಸಗಿ ಬಸ್ಸಿನಲ್ಲಿ ತೆರಳುವಾಗ ಮಹಿಳೆಯ ಮಾಂಗಲ್ಯ (Mangalya) ಸರ ಕಳ್ಳತನವಾಗಿದೆ. ಚಿನ್ನದ ಅಂಗಡಿಗೆ ತೆರಳಿದಾಗಲೆ ಮಹಿಳೆಗೆ ತನ್ನ ಮಾಂಗಲ್ಯ ಸರ ಕಳುವಾಗಿರುವುದು ಗೊತ್ತಾಗಿದ್ದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಗಿರಿಜಾ ಎಂಬುವವರು ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಆಯನೂರಿನಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಇಲ್ಲಿನ ಗಣೇಶ ಜ್ಯೂವೆಲರಿ ಅಭರಣ ಮಳಿಗೆಗೆ ತೆರಳಿದ್ದರು. ಅಂಗಡಿಯವರು ಕೊರಳು ನೋಡಿ ಸರ ಇಲ್ಲವ ಎಂದು ಪ್ರಶ್ನಿಸಿದಾಗ ಗಿರಿಜಾ ಅವರಿಗೆ ತಮ್ಮ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ.

ಬಸ್ಸಿನಲ್ಲಿ ಗಿರಿಜಾ ಅವರ ಪಕ್ಕದಲ್ಲಿ ಹೆಣ್ಣು ಮಗುವನ್ನನು ಹಿಡಿದುಕೊಂಡು ಕುಳಿತಿದ್ದ ಇಬ್ಬರು ಮಹಿಳೆಯರು ಅನುಮಾನಾಸ್ಪದವಾಗಿ ವರ್ತಿಸುತಿದ್ದರು. ಅವರ ಬಗ್ಗೆಯೆ ಅನುಮಾನವಿದೆ ಎಂದು ಗಿರಿಜಾ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರ ನಾಪತ್ತೆ, ಬೈಕುಗಳಲ್ಲಿದ್ದ ಪೆಟ್ರೋಲ್‌ ಕಳವು

Mangalya

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment