ಹಣಗೆರೆಯಿಂದ ಆಯನೂರಿಗೆ ಬಸ್ಸಿನಲ್ಲಿ ಪ್ರಯಾಣ, ಆಭರಣದ ಅಂಗಡಿಗೆ ತೆರಳಿದಾಗ ಮಹಿಳೆಗೆ ಕಾದಿತ್ತು ಆಘಾತ

ಶಿವಮೊಗ್ಗ: ಹಣಗೆರೆಯಿಂದ ಆಯನೂರಿಗೆ ಖಾಸಗಿ ಬಸ್ಸಿನಲ್ಲಿ ತೆರಳುವಾಗ ಮಹಿಳೆಯ ಮಾಂಗಲ್ಯ (Mangalya) ಸರ ಕಳ್ಳತನವಾಗಿದೆ. ಚಿನ್ನದ ಅಂಗಡಿಗೆ ತೆರಳಿದಾಗಲೆ ಮಹಿಳೆಗೆ ತನ್ನ ಮಾಂಗಲ್ಯ ಸರ ಕಳುವಾಗಿರುವುದು ಗೊತ್ತಾಗಿದ್ದು ಎಂದು ದೂರಿನಲ್ಲಿ ಆರೋಪಿಸಲಾಗಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಗಿರಿಜಾ ಎಂಬುವವರು ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಆಯನೂರಿನಲ್ಲಿ ವೈದ್ಯರ ಬಳಿ ಚಿಕಿತ್ಸೆ ಪಡೆದು, ಇಲ್ಲಿನ ಗಣೇಶ ಜ್ಯೂವೆಲರಿ ಅಭರಣ ಮಳಿಗೆಗೆ ತೆರಳಿದ್ದರು. ಅಂಗಡಿಯವರು ಕೊರಳು ನೋಡಿ ಸರ ಇಲ್ಲವ ಎಂದು ಪ್ರಶ್ನಿಸಿದಾಗ ಗಿರಿಜಾ ಅವರಿಗೆ ತಮ್ಮ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ.

ಬಸ್ಸಿನಲ್ಲಿ ಗಿರಿಜಾ ಅವರ ಪಕ್ಕದಲ್ಲಿ ಹೆಣ್ಣು ಮಗುವನ್ನನು ಹಿಡಿದುಕೊಂಡು ಕುಳಿತಿದ್ದ ಇಬ್ಬರು ಮಹಿಳೆಯರು ಅನುಮಾನಾಸ್ಪದವಾಗಿ ವರ್ತಿಸುತಿದ್ದರು. ಅವರ ಬಗ್ಗೆಯೆ ಅನುಮಾನವಿದೆ ಎಂದು ಗಿರಿಜಾ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂಧ ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ರಾತ್ರೋರಾತ್ರಿ ಶ್ರೀಗಂಧದ ಮರ ನಾಪತ್ತೆ, ಬೈಕುಗಳಲ್ಲಿದ್ದ ಪೆಟ್ರೋಲ್‌ ಕಳವು

Mangalya

Leave a Comment